ಪೊಲೀಸ್ ನಿರ್ಬಂಧದ ನಡುವೆಯೂ ಯಶಸ್ವಿ ಹೋರಾಟ ಹೆದ್ದಾರಿ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಸಾಮೂಹಿಕ ಧರಣಿ

mng--26 Nov Kuloor protest
Published on

ಮಂಗಳೂರು: ನಂತೂರು - ಸುರತ್ಕಲ್ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಕೂಳೂರು ಸೇತುವೆ ಬಳಿ ಮಂಗಳವಾರ ಹಮ್ಮಿಕೊಂಡಿದ್ದ ಸಾಮೂಹಿಕ ಧರಣಿ ಪೊಲೀಸ್ ಅನುಮತಿಯ ಹೊರತಾಗಿಯೂ ಯಶಸ್ವಿಯಾಗಿ ನಡೆದಿದೆ ಎಂದು ಸಮಿತಿ ಹೇಳಿದೆ.

ಮಾರಣಾಂತಿಕ ಹೆದ್ದಾರಿ ಗುಂಡಿಗಳು, ವರ್ಷಗಳಿಂದ ಕುಂಟುತ್ತಿರುವ ಕೂಳೂರು ಹೊಸ ಸೇತುವೆ, ನಂತೂರು ಮೇಲ್ಸೇತುವೆಗಳ ಕಾಮಗಾರಿ, ಪೂರ್ಣಪ್ರಮಾಣದ ದುರಸ್ತಿ ಇಲ್ಲದೆ ಅವ್ಯವಸ್ಥೆಯ ಆಗರವಾಗಿರುವ ಹೆದ್ಧಾರಿ ಸಮಸ್ಯೆಗಳನ್ನು ಕಾಲಮಿತಿಯಲ್ಲಿ ಪರಿಹರಿಸಬೇಕು ಎಂಬ ಬೇಡಿಕೆ ಇಟ್ಟುಕೊಂಡು ಹಮ್ಮಿಕೊಳ್ಳಲಾದ ಶಾಂತಿಯುತ ಸಾಮೂಹಿಕ ಧರಣಿಗೆ ಮಂಗಳೂರು ಪೊಲೀಸ್ ಕಮೀಷನರ್ ಕೊನೆಯ ಕ್ಷಣದಲ್ಲಿ ಅನುಮತಿ ನಿರಾಕರಿಸಿದರು.

ಧ್ವನಿವರ್ಧಕ ಬಳಸದೆ, ಶಾಮಿಯಾನ ಹಾಕಲು ಅವಕಾಶ ನೀಡದಿದ್ದರೂ ಸುಡುವ ಬಿಸಿಲಿನಲ್ಲೇ ರಸ್ತೆ ಬದಿ ಕುಳಿತು ಧರಣಿ ನಡೆಯಿತು. ಘೋಷಣೆ, ಭಾಷಣ ಮಧ್ಯಾಹ್ನದ ತನಕ ಮುಂದುವರಿಯಿತು. ಈ ಸಂದರ್ಭ ದೊಡ್ಡ ಸಂಖ್ಯೆಯಲ್ಲಿ ಪೊಲೀಸರು ಸುತ್ತುವರಿದಿದ್ದರು. ಪೊಲೀಸರು ಬಂಧಿಸುವದಾದರೆ ಸಿದ್ದರಿರುವುದಾಗಿ ಪ್ರಕಟಿಸಲಾಯಿತು. ಧರಣಿಯ ಎದುರಾಗಿ ಎಫ್‌ಐಆರ್ ಹಾಕಿದರೆ ಕಮೀಷನರ್ ವಿರುದ್ಧ ಪ್ರತಿಭಟನೆ ನಡೆಸುವಾದಾಗಿ, ಬಂಧಿಸಲು ಆಗ್ರಹಿಸುವುದಾಗಿ ತೀರ್ಮಾನಿಸಲಾಯಿತು.

ಸಾಮೂಹಿಕ ಧರಣಿಯಲ್ಲಿ ಸಿಪಿಎಂ, ಕಾಂಗ್ರೆಸ್ ಪಕ್ಷದ ಮುಖಂಡರು, ದಲಿತ, ಕಾರ್ಮಿಕ, ಯುವಜನ, ಮಹಿಳಾ ಸಂಘಟನೆಗಳು ಸೇರಿದಂತೆ ಹಲವು ಸಾಮಾಜಿಕ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಭಾಗವಹಿಸಿದ್ದರು. ದೆದ್ದಾರಿ ಸಮಸ್ಯೆಗಳಿಂದ ಆಕ್ರೋಶಿರಾಗಿರುವ ಸಾರ್ವಜನಿಕರೂ ಹೊಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು.

ಪಾದಯಾತ್ರೆ ನಡೆಸಲು ನಿರ್ಧಾರ

ನಂತೂರು - ಸುರತ್ಕಲ್ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗದಿದ್ದಲ್ಲಿ ಹೋರಾಟವನ್ನು ಮತ್ತಷ್ಟು ಚುರುಕುಗೊಳಿಸಲು ಕೂಳೂರಿನಿಂದ ಜಿಲ್ಲಾಧಿಕಾರಿ ಕಚೇರಿ ಅಥವಾ ಹೆದ್ದಾರಿ ಪ್ರಾಧಿಕಾರದವರಗೆ ಪಾದಯಾತ್ರೆ ನಡೆಸುವುದಾಗಿ ಘೋಷಿಸಲಾಯಿತು. ಕಮೀಷನರ್ ಅನುಪಮ್ ಅಗರ್ ವಾಲ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು ಎಂದು ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net