ಆಲೆಟ್ಟಿ ಲಕ್ಷ್ಮೀ ಸಂಜೀವಿನಿ ಗ್ರಾ.ಪಂ. ಒಕ್ಕೂಟ-ಸರೋಜಿನಿ ಕಾಪುಮಲೆ ಸಹಿತ ಸಾಧಕರಿಗೆ ಸನ್ಮಾನ

mng--Aletty
Published on

ಸುಳ್ಯ: ಆಲೆಟ್ಟಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆದ ಲಕ್ಷ್ಮೀ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಆಲೆಟ್ಟಿ ಇದರ ವಾರ್ಷಿಕ ಮಹಾಸಭೆಯಲ್ಲಿ ಒಕ್ಕೂಟದ ಮೂವರು ಸಾಧಕರನ್ನು ಸನ್ಮಾನಿಸಲಾಯಿತು.

ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಇತ್ತೀಚೆಗೆ ಸಂಜೀವಿನಿ ಹೇರ್ ಆಯಿಲ್ ಪ್ರಾಡಕ್ಟ್ ಮಾರುಕಟ್ಟೆಗೆ ತರುವಲ್ಲಿ ಯಶಸ್ವಿಯಾದ ಸರೋಜಿನಿ ಕಾಪುಮಲೆ, ಸಂಜೀವಿನಿ ಸಂಘದ ಮಾಜಿ ಅಧ್ಯಕ್ಷೆ ಅನಿತಾ ಬಡ್ಡಡ್ಕ, ಹಿರಿಯ ಸದಸ್ಯೆ ಗೌರಿ ಆಲೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಒಕ್ಕೂಟದ ಅಧ್ಯಕ್ಷರಾದ ಅರುಣ ಕುಮಾರಿ ಹಾಗೂ ಪಂಚಾಯತ್ ಅಧ್ಯಕ್ಷರಾದ ವೀಣಾ ವಸಂತ ಹಾಗೂ ವಲಯ ಮೇಲ್ವಿಚಾರಕರಾದ ಮಹೇಶ್, ತಾಲೂಕು ಕೃಷಿ ವ್ಯವಸ್ಥಾಪಕರಾದ ಜೀವನ್ ಪ್ರಾಕಾಶ್, ಕೆನರಾ ಬ್ಯಾಂಕ್ ಆಪ್ತ ಸಮಾಲೋಚಕರಾದ ಸುಜಾತ, ಗ್ರಂಥಪಾಲಕಿ ರಾಜೇಶ್ವರಿ, ಡಾಟ ಆಪರೇಟರ್ ನೇತ್ರಾ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net