ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ತೆನೆ ವಿತರಣೆ

mng-sep6-sharav3
Published on

ಮಂಗಳೂರು: ಕರಾವಳಿಯ ಐತಿಹಾಸಿಕ ಮಹಾಗಣಪತಿ ದೇವಸ್ಥಾನಗಳಲ್ಲೊಂದಾದ ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಸಂಭ್ರಮದ ತೆನೆ ಪೂಜೆ ಶುಕ್ರವಾರ ನಡೆಯಿತು. ನೂರಾರು ಭಕ್ತರು ಪ್ರಸಾದವಾಗಿ ತೆನೆಗಳನ್ನು ಸ್ವೀಕರಿಸಿ ಕೃತಾರ್ಥರಾದರು.


ಗೌರಿ ಪೂಜೆಯ ದಿನವಾದ ಸೆ.6ರಂದು ಬೆಳಗ್ಗೆ ತೆನೆಪೂಜೆ, ಗಣಹೋಮ, ಮಹಾಪೂಜೆ ನೆರವೇರಿತು. ಬಳಿಕ ಶರವು ಕ್ಷೇತ್ರದ ಶಿಲೆಶಿಲೆ ಆಡಳಿತ ಮೊಕ್ತೇಸರ ಶರವು ರಾಘವೇಂದ್ರ ಶಾಸಿ , ಸುದೇಶ್ ಶಾಸಿ, ರಾಹುಲ್ ಶಾಸಿ ಭಕ್ತಾದಿಗಳಿಗೆ ತೆನೆ ವಿತರಣೆಗೆ ಚಾಲನೆ ನೀಡಿದರು. ಸಾವಿರಾರು ಮಂದಿ ಸರತಿ ಸಾಲಿನಲ್ಲಿ ನಿಂತು ತೆನೆ ಸ್ವೀಕರಿಸಿದರು.


5 ಸಾವಿರ ತೆಂಗಿನಕಾಯಿ ಪಲ್ಲಪೂಜೆ: ಸೆ.7ರಂದು ಬೆಳಗ್ಗೆ 6 ಕ್ಕೆ ಉಷಾಕಾಲ ಪೂಜೆ, 8 ರಿಂದ 21 ಭಕ್ಷದೊಂದಿಗೆ ಕಲ್ಪೋಕ್ತ ಪೂಜೆ, ಈ ಸಂದರ್ಭ ಬಗೆಬಗೆಯ ಹೂವಿನಿಂದ ದೇವರಿಗೆ ಪೂಜೆ ನಡೆಯಲಿದೆ. ಉಂಡೆ, ಚಕ್ಕುಲಿ, ಮೋದಕ, ಪಂಚಕಜ್ಜಾಯ ಅಪ್ಪಪ್ರಸಾದ ಮುಖೇನ 21 ಭಕ್ಷ್ಯಗಳು ಮಹಾಗಣಪತಿ ದೇವರಿಗೆ ಅರ್ಪಣೆಯಾಗಲಿದೆ. 9 ಕ್ಕೆ ಅಗ್ನಿ ಜನನ, ಮಹಾಗಣಪತಿ ಹೋಮದ ಆರಂಭ, 11.30ಕ್ಕೆ ಮಹಾಗಣಪತಿ ಹೋಮದ ಪೂರ್ಣಾಹುತಿ, 11.45ಕ್ಕೆ 5 ಸಾವಿರ ತೆಂಗಿನಕಾಯಿಯ ಪಲ್ಲಪೂಜೆ, ಮಧ್ಯಾಹ್ನ 12 ಕ್ಕೆ ಮಹಾಪೂಜೆ ಮತ್ತು ಮಂಗಳಾರತಿ, 12.15ಕ್ಕೆ ಸಣ್ಣ ರಥೋತ್ಸವ, 9 ಕ್ಕೆ ರಾತ್ರಿ ಮಹಾಪೂಜೆ ಮತ್ತು ಹೂವಿನ ಪೂಜೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net