ಉರ್ವಸ್ಟೋರ್ ಜಾನಪದ ವಿಚಾರ ಸಂಕಿರಣ

mng--12 june janapada
Published on

ಮಂಗಳೂರು: ಮಂಗಳೂರು ತಾಲೂಕು ಮಹಿಳಾಮಂಡಲಗಳ ಒಕ್ಕೂಟ ಉರ್ವ ಸ್ಟೋರ್ ಹಾಗೂ ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ದಕ್ಷಿಣ ಕನ್ನಡ ಜಿಲ್ಲಾ ತಾಲೂಕು ಘಟಕ ಮಂಗಳೂರು ಇದರ ಸಹಭಾಗಿತ್ವದಲ್ಲಿ ಪದಗ್ರಹಣ ಮತ್ತು ಜಾನಪದ ವಿಚಾರ ಸಂಕಿರಣ ಇತ್ತೀಚಿಗೆ ಉರ್ವ ಸ್ಟೋರ್‌ನ ಮಂಗಳೂರು ತಾಲೂಕು ಒಕ್ಕೂಟಗಳ ಸಭಾಂಗಣ ವನಿತಾಂಗಣದಲ್ಲಿ ನಡೆಯಿತು.


ಸಂಪನ್ಮೂಲ ವ್ಯಕ್ತಿಯಾಗಿ ಪುರುಷೋತ್ತಮ ಬಲ್ಯಾಯ ಅವರು ‘ಜಾನಪದ ಅಂದು ಇಂದು ಮುಂದು’ ಎನ್ನುವ ವಿಚಾರದಲ್ಲಿ ಮಾತನಾಡಿ ಜಾನಪದ ಅನ್ನುವ ವಿಷಯ ಸಾಗರದಷ್ಟು ಆಳವಾದ ವಿಚಾರಗಳನ್ನು ಹೊಂದಿದ್ದು ಪರಿಸರ ಮತ್ತು ಜನರ ಜೀವನ ಶೈಲಿಯ ಅವಿನಾಭಾವವೇ ಜಾನಪದ ಎಂದರು. ಜಾನಪದ ಪದ್ಧತಿಯಂತೆ ನಮ್ಮ ಆಹಾರ ಕ್ರಮಗಳನ್ನು ರೊಢಿಸಿಕೊಂಡಾಗ ಉತ್ತಮ ಆರೋಗ್ಯಪಡೆಯಲು ಸಾಧ್ಯ ಎಂದರು.


ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ನಿಯೋಜಿತ ಅಧ್ಯಕ್ಷೆ ಚಂಚಲ ತೇಜೋಮಯ ಅಧ್ಯಕ್ಷತೆ ವಹಿಸಿದ್ದರು.
ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಪ್ರವೀಣ್ ಕುಮಾರ್ ಕೋಡಿಯಲ್ ಬೈಲ್ ಉದ್ಘಾಟಿಸಿದರು. ರಾಜೇಶ್ ಸ್ಕೈಲಾರ್ಕ್, ತಾರಾನಾಥ್ ಶೆಟ್ಟಿ ಬೋಳಾರ, ರಾಜೇಶ್ ಆಳ್ವ, ಮಾಲತಿ ಶೆಟ್ಟಿ ಮಾಣೂರು , ಜನಾರ್ದನ ಬುಡೋಳಿ, ದಿನ್ ರಾಜ್, ಪ್ರಮೀಳಾ ಸಾಯಿ ಪ್ರಿಯ, ಪದ್ಮಶ್ರೀ ಭಟ್ ನಿಡ್ಡೋಡಿ, ಮಹಿಳಾ ಒಕ್ಕೂಟದ ಗೌರವ ಸಲಹೆಗಾರರಾದ ದೇವಕಿ ಅಚ್ಚುತ, ಉಪಾಧ್ಯಕ್ಷೆ ಮನೋರಮ ಉಮೇಶ್ ಉಪಸ್ಥಿತರಿದ್ದರು.


ನೂತನ ಪದಾಧಿಕಾರಿಗಳು: ಮಂಗಳೂರು ಘಟಕದ ಅಧ್ಯಕ್ಷರಾಗಿ ಚಂಚಲ ತೇಜೋಮಯ, ಉಪಾಧ್ಯಕ್ಷೆ ಜನಾರ್ದನ ಬುಡೊಳಿ, ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ ಕೊಕ್ಕಡ, ಕೋಶಾಧಿಕಾರಿ ಆಶಾಶ್ರೀ ಆರ್ ದೇವಾಡಿಗ, ಸಂಘಟನಾ ಕಾರ್ಯದರ್ಶಿ ರೇಖಾ ಸುರೇಶ್ ರಾವ್, ಸಾಂಸ್ಕೃತಿಕ ಕಾರ್ಯದರ್ಶಿ ಪ್ರಶಾಂತ್ ಕಂಕನಾಡಿ, ಗೌರವ ಸಲಹೆಗಾರರಾಗಿ ಅರುಣ ನಾಗರಾಜ್ ಆಯ್ಕೆಯಾದರು.


ಆಶಾಶ್ರೀ ದೇವಾಡಿಗ ಸ್ವಾಗತಿಸಿದರು. ಶಿವಪ್ರಸಾದ ಕೊಕ್ಕಡ ಕಾರ್ಯಕ್ರಮ ನಿರೂಪಿಸಿದರು. ರೇಖಾ ಶೆಟ್ಟಿ ವಂದಿಸಿದರು. ಭಾರತಿ. ಎಂ. ಅನುರಾಧ ರಾಜೀವ್, ಪ್ರೇಮ ಮಾಧವ್, ಲತಾ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net