ಸರೋಜಿನಿ ಮಧುಸೂದನ ಕುಶೆ ವಿದ್ಯಾ ಸಂಸ್ಥೆಯಲ್ಲಿ ಮುದ್ದುಕೃಷ್ಣ ವೇಷ ಸ್ಪರ್ಧೆ 2024

mng--25 Aug sarojini kushe
Published on


ಮಂಗಳೂರು: ಸರೋಜಿನಿ ಮಧುಸೂದನ ಕುಶೆ ವಿದ್ಯಾ ಸಂಸ್ಥೆಯಲ್ಲಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಮುದ್ದುಕೃಷ್ಣ ವೇಷ ಸ್ಪರ್ಧೆ 2024 ಶಾಲಾ ಸಭಾಂಗಣದಲ್ಲಿ ಜರುಗಿತು.


ಪ್ರಾಂಶುಪಾಲ ಬಿಂದುಸಾರ ಎಲ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಇಂತಹ ಸ್ಪರ್ಧೆಗಳನ್ನು ಏರ್ಪಡಿಸುವುದರಿಂದ ಮಕ್ಕಳಲ್ಲಿರುವ ಸೂಕ್ತ ಪ್ರತಿಭೆಯನ್ನು ಹೊರ ತರಲು ಸಾಧ್ಯವಾಗುತ್ತದೆ,ಅದೇ ರೀತಿ ನಾವೆಲ್ಲರೂ ಶ್ರೀ ಕೃಷ್ಣನ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಯಶಸ್ಸನ್ನು ಗಳಿಸಲು ಸಾಧ್ಯ ಎಂದರು.


ಈ ಸ್ಪರ್ಧೆಗೆ ತೀರ್ಪುಗಾರರಾಗಿ ಆಗಮಿಸಿದ ನಗರದ ಉದ್ಯಮಿ ಯೋಗಿತಾ.ಪಿ.ಶೆಟ್ಟಿ ಮಾತನಾಡಿ, ಮಕ್ಕಳ ಯಶಸ್ಸಿನ ಹಿಂದೆ ಪೋಷಕರ ಪಾತ್ರವೂ ಕೂಡ ಮಹತ್ವದ್ದು, ಅದೇ ರೀತಿ ಶ್ರೀ ಕೃಷ್ಣಗಿರುವ ಬೇರೆ ಬೇರೆ ಹೆಸರುಗಳನ್ನು ತಿಳಿಸಿ ಆ ಹೆಸರಿನ ಹಿಂದೆ ಇರುವ ಮಹತ್ವವನ್ನು ತಿಳಿಸಿದರು.

ಮತ್ತೋರ್ವ ತೀರ್ಪುಗಾರರಾದ ಶಾರದಾ ಪದವಿ ಪೂರ್ವ ಕಾಲೇಜಿನ ಗಣಿತಶಾಸ್ತ್ರ ಉಪನ್ಯಾಸಕಿ ಅನುಪಮಾ ಜಿ. ಕೆ. ಶುಭವನ್ನು ಹಾರೈಸಿದರು.
ಸಂಸ್ಥೆಯ ಆಡಳಿತಾಧಿಕಾರಿ ಮುರಳೀಧರ್ ರಾವ್ ಉಪಸ್ಥಿತರಿದ್ದು ಶುಭ ಹಾರೈಸಿದರು. ಉಪ ಪ್ರಾಂಶುಪಾಲೆ ಪವಿತ್ರ ಹಾಗೂ ಸಹ ಮುಖ್ಯ ಶಿಕ್ಷಕಿ ಸೌಜನ್ಯ ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಬಹುಮಾನ ವಿತರಿಸಲಾಯಿತು. ಶಿಕ್ಷಕಿ ಸ್ವಾತಿ ಅತಿಥಿಗಳನ್ನು ಪರಿಚಯಿಸಿದರು. ವರಲಕ್ಷ್ಮಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸ್ನೇಹ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net