ಸಮಯ ಪ್ರಜ್ಞೆ ಮೆರೆದ ಬಸ್ ಚಾಲಕ-ನಿರ್ವಾಹಕರಿಗೆ ಸನ್ಮಾನ

mng--1 Aug Bus Sanmana
Published on

ಮಂಗಳೂರು: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹೃದಯ ನೋವು ಕಾಣಿಸಿಕೊಂಡು ಅಸ್ವಸ್ಥಳಾದ ವಿದ್ಯಾರ್ಥಿನಿಯನ್ನು ಶರವೇಗದಲ್ಲಿ ತೆರಳಿ ಆಸ್ಪತ್ರೆಗೆ ದಾಖಲಿಸಿ ಸಮಯ ಪ್ರಜ್ಞೆ ಮೆರೆದ ಖಾಸಗಿ ಬಸ್ ಚಾಲಕ, ನಿರ್ವಾಹಕರನ್ನು ದ.ಕ ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ವತಿಯಿಂದ ಗುರುವಾರ ಜಿಲ್ಲಾ ಕಚೇರಿಯಲ್ಲಿ ಸನ್ಮಾನಿಸಲಾಯಿತು.


ಮಂಗಳಾದೇವಿಯಿಂದ ಕುಂಜತ್ತಬೈಲ್‌ಗೆ ಚಲಿಸುವ 13 ಎಫ್ ಕೃಷ್ಣ ಪ್ರಸಾದ್ ಟ್ರಾವೆಲ್ಸ್ ಚಾಲಕ ಗಜೇಂದ್ರ ಕುಂದರ್ ನಿರ್ವಾಹಕರುಗಳಾದ ಸುರೇಶ್, ಮಹೇಶ್ ಅವರನ್ನು ದ.ಕ ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ ಸನ್ಮಾನಿಸಿದರು.

ಮಾದರಿ ಕೆಲಸ: ಬಸ್ ಸಿಬ್ಬಂದಿ ಮಾನವೀಯ ಸೇವೆಗಳಿಗೆ ಇತಿಹಾಸವಿದೆ. ಗ್ರಾಮಾಂತರ ಭಾಗದಲ್ಲಿ ವಿಷದ ಹಾವು ಕಚ್ಚಿದ ರೋಗಿಯನ್ನು ಮಧ್ಯರಾತ್ರಿ ಆಸ್ಪತ್ರೆಗೆ ದಾಖಲಿಸಿದ ಚರಿತ್ರೆಯಿದೆ. ಸಿಬ್ಬಂದಿಯ ಮಾನವೀಯ ಸೇವೆಗೆ ಸಾರ್ವಜನಿಕವಾಗಿ ಸಿಕ್ಕಿರುವ ಪ್ರೋತ್ಸಾಹ ಪ್ರಶಂಸನೀಯ. ಸಿಬ್ಬಂದಿ ಮೆರೆದ ಮಾನವೀಯ ಸೇವೆ ಎಲ್ಲರಿಗೂ ಮಾದರಿ ಎಂದು ಅಝೀಝ್ ಪರ್ತಿಪ್ಪಾಡಿ ಹೇಳಿದರು.'


ಮಾಜಿ ಅಧ್ಯಕ್ಷ ದಿಲ್ ರಾಜ್ ಆಳ್ವ, ಕಾರ್ಯದರ್ಶಿ ರಾಮಚಂದ್ರ ಪಿಲಾರ್, ಉಪಾಧ್ಯಕ್ಷರುಗಳಾದ ಕೆ.ರಾಮಚಂದ್ರ ನಾಯ್ಕ, ಜತೆ ಕಾರ್ಯದರ್ಶಿ ರಾಜೇಶ್ ಟಿ, ಪ್ರಧಾನ ಮಾಜಿ ಅಧ್ಯಕ್ಷ ಜಯಶೀಲ ಅಡ್ಯಂತಾಯ, ಮಾಜಿ ಅಧ್ಯಕ್ಷರುಗಳಾದ ನೆಲ್ಸನ್ ಪಿರೇರಾ, ಬಸ್ ಮಾಲೀಕ ಶ್ರವಣ್ , ಮಾಜಿ ಪ್ರ.ಕಾ ಸುಚೇತನ್ ಕಾವೂರು, ಚಂದ್ರಕಲಾ, ಮೋಹನ್ ಮೆಂಡನ್, ರಾಜೇಂದ್ರ ಶೆಟ್ಟಿ, ಸೇಸಪ್ಪ ಪೂಜಾರಿ, ಇಸ್ಮಾಯಿಲ್, ಅಬ್ಬಾಸ್ ಆಲಿ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net