

ಮಂಗಳೂರು: ಪ್ರಣವ ಸೌಹಾರ್ದ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಜಿ.ಆರ್. ಪ್ರಸಾದ್ ಮುಂದಿನ ಐದು ವರುಷದ ಅವಧಿಗೆ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.
ಸ್ಥಾಪಕ ಅಧ್ಯಕ್ಷರಾದ ಇವರು ಒಂದು ದಶಕದಲ್ಲಿ ಪ್ರಣವದ ಸಂಸ್ಥೆಯ ಉತ್ತಮ ಬೆಳವಣಿಗೆಗೆ ಬಹಳಷ್ಟು ಕೊಡುಗೆ ನೀಡಿದ್ದರು. ಪ್ರಸ್ತುತ ಸಹಕಾರ ಭಾರತಿ ಮಂಗಳೂರು ಮಹಾನಗರ ಜಿಲ್ಲೆಯ ಅಧ್ಯಕ್ಷ ಅಲ್ಲದೆ ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು ಇದರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತಿದ್ದಾರೆ.
ಆಡಳಿತ ಮಂಡಳಿಯಲ್ಲಿ ಉಪಾಧ್ಯಕ್ಷ ಜಿ. ಪ್ರಶಾಂತ್ ಪೈ ಮತ್ತು ನಿರ್ದೇಶಕರಾಗಿ ಸೋಮಪ್ಪ ನಾಯ್ಕ , ದಯಾಸಾಗರ ಪೂಂಜಾ, ರವೀಂದ್ರನಾಥ್ ಪಿ . ಯಚ್ ಸುಬ್ರಹ್ಮಣ್ಯ ಭಟ್, ರವಿಶಂಕರ್ ಪಿ ಎನ್, ಪದ್ಮರಾಜ್ ಬಲ್ಲಾಳ್, ಜಯಲಕ್ಷ್ಮಿ ಚಂದ್ರಹಾಸ್, ಮೀರಾ ಕರ್ಕೇರಾ , ಭಗವಾನ್ ದಾಸ್ ಅಡ್ಯಂತಾಯ , ಡಾ. ಶ್ಯಾಮ್ ಪ್ರಸಾದ್ ಶೆಟ್ಟಿ , ಪ್ರೊ. ವೆಂಕಟೇಶ್ವರ , ಜಗದೀಶ್ ಶೆಟ್ಟಿ ಬಿಜೈ ಇವರೆಲ್ಲಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವೃತ್ತಿಪರ ನಿರ್ದೇಶಕರಾಗಿ ಮಮತಾ ರಾವ್, ಅಡ್ವೊಕೇಟ್ ಸತೀಶ್ ಕುಮಾರ್ ಭಟ್ ಮತ್ತು ಕ್ರಿಯಾತ್ಮಕ ನಿರ್ದೇಶಕರಾಗಿ ಕೃಷ್ಣ ಕಾಮತ್ ನಿಯುಕ್ತಿ ಗೊಂಡಿದ್ದಾರೆ.
ಲೆಕ್ಕ ಪರಿಶೋಧನಾ ಇಲಾಖೆಯ ಅಧಿಕಾರಿ ನವೀನ್ ಕುಮಾರ್ ಎಂ ಎಸ್ ಚುನಾವಣಾಧಿಕಾರಿಯಾಗಿದ್ದರು.