ಜೂನ್ 18, 19 ರಂದು ಮಂಗಳೂರಿನಲ್ಲಿ ಎಲ್ಲೆಲ್ಲಿ ವಿದ್ಯುತ್ ಕಡಿತ ?

power cut
Published on

ಮಂಗಳೂರು: ನಂದಿಗುಡ್ಡ ಉಪಕೇಂದ್ರದಿಂದ ಹೊರಡುವ ಕುಡುಪಾಡಿ ಫೀಡರ್‌ನಲ್ಲಿ ಜೂನ್ 18 ರಂದು ಜಂಪರ್ ಬದಲಾವಣೆ ಹಾಗೂ ಜಿಒಎಸ್ ದುರಸ್ತಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 10ರಿಂದ ಸಂಜೆ 5 ತನಕ ನಂದಿಗುಡ್ಡ, ಬಪ್ಪಾಲ್, ಮಜಿಲ, ಯೆನೆಪೋಯ ಕ್ಲಸ್ಟರ್ಸ್, ರೋಶನಿ ನಿಲಯ, ವೆಲೆನ್ಸಿಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ಕುಲಶೇಖರ ಉಪಕೇಂದ್ರದಿಂದ ಹೊರಡುವ ಮರೋಳಿ ಫೀಡರ್‌ನಲ್ಲಿ ಜೂನ್ 18 ರಂದು ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 10 ರಿಂದ ಸಂಜೆ 5 ತನಕ ಮರೋಳಿ, ಜಯನಗರ, ವಸಂತನಗರ, ಎಂಜಲೋರ್ ಚರ್ಚ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ಕುಲಶೇಖರ ಉಪ ಕೇಂದ್ರದಿಂದ ಹೊರಡುವ ಕುಡುಪು ಫೀಡರ್‌ನಲ್ಲಿ ಜೂನ್ 19 ರಂದು ಜಂಪರ್ ಬದಲಾವಣೆ ಹಾಗೂ ಜಿಒಎಸ್ ದುರಸ್ತಿ ಕಾಮಗಾರಿ ಹಮ್ಮಿಕೊಕೊಳ್ಳಲಾಗಿದೆ. ಅಂದು ಬೆಳಗ್ಗೆ 10ರಿಂದ ಸಂಜೆ 5 ತನಕ ಕುಡುಪು, ಸರಿಪಲ್ಲ, ನೂಜಿ, ಸಿಲ್ವರ್‌ಗೇಟ್, ಡೇರಿ, ಬೈತುರ್ಲಿ, ಜೆ.ಎಚ್.ಬಿ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಗೊಳ್ಳಲಿದೆ.
ಕುಲಶೇಖರ ಉಪಕೇಂದ್ರದಿಂದ ಹೊರಡುವ ತಾರೆತೋಟ(ಪದವು) ಫೀಡರ್‌ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿಒಎಸ್ ದುರಸ್ತಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಅಂದು ಬಿಕರ್ನಕಟ್ಟೆ, ಜಯಶ್ರೀ ಗೇಟ್, ತಾತಾವು, ತಾರೆತೋಟ, ಜಯನಗರ, ಬಜ್ಜೋಡಿ, ಸಂದೇಶ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ಬಿಜೈ ಉಪ ಕೇಂದ್ರದಿಂದ ಹೊರಡುವ 11ಕೆವಿ ವಿವೇಕನಗರ ಫೀಡರ್‌ನಲ್ಲಿ ಜೂನ್ 19 ರಂದು ಜಂಪರ್ ಬದಲಾವಣೆ ಹಾಗೂ ಜಿಒಎಸ್ ದುರಸ್ತಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 10 ರಿಂದ ಸಂಜೆ 5 ತನಕ ಶ್ರೀದೇವಿ ಕಾಲೇಜು ರಸ್ತೆ, ಕೆಎಸ್‌ಆರ್‌ಟಿಸಿ, ಸಿ.ಜಿ ಕಾಮತ್ ರಸ್ತೆ, ಜೈಲ್ ರೋಡ್, ಎಂ.ಜಿ ರೋಡ್, ಲಾಲ್‌ಭಾಗ್ ರಸ್ತೆ, ಬಳ್ಳಾಲ್‌ಬಾಗ್, ಮಾನಸ ಟವರ್ ಎದುರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net