ದಿಗಂತ್ ನಾಪತ್ತೆ ಪ್ರಕರಣ ಪೊಲೀಸರಿಂದ ಹೈಕೋರ್ಟ್‌ಗೆ ವರದಿ

mng---9 march Diganth
Published on

ಮಂಗಳೂರು: ದಿಢೀರ್ ನಾಪತ್ತೆಯಾಗಿ ರಾಜ್ಯದಲ್ಲೇ ಸಂಚಲನ ಉಂಡು ಮಾಡಿದ್ದ ಫರಂಗಿಪೇಟೆಯ ಪಿಯುಸಿ ವಿದ್ಯಾರ್ಥಿ ದಿಗಂತ್ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಹೈಕೋರ್ಟ್‌ಗೆ ವರದಿ ಸಲ್ಲಿಸಿದ್ದಾರೆ.

ಫೆ.25ರಿಂದ 12 ದಿನಗಳ ಕಾಲ ನಾಪತ್ತೆಯಾಗಿದ್ದ ದಿಗಂತ್ ಮಾ.8ರಂದು ಉಡುಪಿಯಲ್ಲಿ ಪತ್ತೆಯಾಗಿದ್ದ. ಅಲ್ಲಿಂದ ಕರೆ ತಂದು ವಿಚಾರಣೆ ನಡೆಸಿದ ಪೊಲೀಸರು ಆತನನ್ನು ಮಕ್ಕಳ ರಕ್ಷಣಾ ಕೇಂದ್ರದಲ್ಲಿ ಇರಿಸಿದ್ದರು. ಇದಕ್ಕೂ ಮುನ್ನ ಪೋಷಕರು ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಹಾಕಿ ಬಾಲಕನನ್ನು ಪತ್ತೆ ಮಾಡಿಕೊಡಬೇಕೆಂದು ಕೇಳಿಕೊಂಡಿದ್ದರು. ಇದರಂತೆ ಮಾರ್ಚ್ 12ರಂದು ಪೊಲೀಸರು ಹೈಕೋರ್ಟ್‌ಗೆ ಅಫಡವಿಟ್ ಸಲ್ಲಿಸಿದ್ದು, ಸದ್ಯಕ್ಕೆ ಹುಡುಗ ಮಕ್ಕಳ ರಕ್ಷಣಾ ಕೇಂದ್ರದಲ್ಲಿದ್ದು, ಆತನಿಗೆ ಕೌನ್ಸಿಲಿಂಗ್ ಅಗತ್ಯ ಇರುವ ಬಗ್ಗೆ ಉಲ್ಲೇಖಿಸಿದ್ದಾರೆಂದು ತಿಳಿದು ಬಂದಿದೆ.

ಹೈಕೋರ್ಟ್ ವಿಚಾರಣೆ ಸಂದರ್ಭ ಪೋಷಕರ ಕಡೆಯ ವಕೀಲರು, ದಿಗಂತ್ ಪಿಯುಸಿ ವಿದ್ಯಾರ್ಥಿಯಾಗಿದ್ದು, ಸದ್ಯ ಪರೀಕ್ಷೆ ನಡೆಯುತ್ತಿದೆ. ಇನ್ನೂ ಕೆಲವು ಪರೀಕ್ಷೆ ಉಳಿದಿದ್ದು, ಪೋಷಕರ ಅಪೇಕ್ಷೆಯಂತೆ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಸಿಡಬ್ಲುೃಸಿ ವರದಿಯಂತೆ ಪೊಲೀಸರು ಅಫಿಡವಿಟ್ ಹಾಕಿದ್ದಾರೆ. ಪರೀಕ್ಷೆ ಹೆಸರಲ್ಲಿ ಬಾಲಕನಿಗೆ ಒತ್ತಡ ಹೇರಬೇಡಿ. ಮುಂದಿನ ವಾರ ನಿಮ್ಮ ಅಹವಾಲು ಪರಿಗಣಿಸುವುದಾಗಿ ಹೇಳಿದ್ದಾರೆ.

ಪೋಷಕರಿಗೆ ಮಗನನ್ನು ಭೇಟಿಯಾಗಲು ಅವಕಾಶ ನೀಡಬೇಕೆಂದು ಕೇಳಿದ್ದಾರೆ. ಅದಕ್ಕೆ ಅಪ್ರಾಪ್ತ ಮಗನ ಬಗ್ಗೆ ಆಸ್ಥೆ ವಹಿಸುವ ವಿಚಾರದಲ್ಲಿ ಪೋಷಕರಿಗೆ ಮೊದಲ ಆದ್ಯತೆ ಇರುತ್ತದೆ. ಜೊತೆಗೆ ನೀವು ಕೂಡಾ ಭೇಟಿಯಾಗಬಹುದು. ಅದಕ್ಕೇನೂ ಸರ್ಕಾರಿ ವಕೀಲರ ಆಕ್ಷೇಪ ಇರಲಿಕ್ಕಿಲ್ಲ ಎಂದು ಪೋಷಕರ ಕಡೆಯ ವಕೀಲರಿಗೆ ನ್ಯಾಯಾಧೀಶರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net