ನಂತೂರು ರಿಕ್ಷಾ ಅಪಘಾತ ಮಹಿಳೆ ಮೃತ್ಯು

accident-15
Published on

ಮಂಗಳೂರು: ನಿರ್ಲಕ್ಷೃದ ಚಾಲನೆಯಿಂದ ಆಟೋ ರಿಕ್ಷಾ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಪರಿಣಾಮ ಅದರಲ್ಲಿ ಪ್ರಯಾಣಿಸುತ್ತಿದ್ದ ನಳಿನಿ ಆರ್.ಶೆಟ್ಟಿ ಅವರು ತಲೆಗೆ ಗಾಯಗೊಂಡು ಮೃತಪಟ್ಟಿದ್ದಾರೆ.


ಆಟೋ ಚಾಲಕ ಲೋಕೇಶ್ ಅಮೀನ್ ನಂತೂರು ಕಡೆಯಿಂದ ಶಿವಭಾಗ್ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವ ಸಂದರ್ಭ ನಂತೂರು ಜಂಕ್ಷನ್ ಬಳಿಯ ಬಸ್ ನಿಲ್ದಾಣದಿಂದ ಸ್ಪಲ್ಪ ಮುಂದೆ ಘಟನೆ ನಡೆದಿದೆ. ತನ್ನ ಮುಂಭಾಗದಲ್ಲಿ ಹೋಗುತ್ತಿದ್ದ ವಾಹನವೊಂದನ್ನು ಎಡ ಭಾಗದಿಂದ ಓವರ್ ಟೇಕ್ ಮಾಡುವ ಭರದಲ್ಲಿ ಆಟೋ ರಿಕ್ಷಾ ರಸ್ತೆಯ ತೀರಾ ಎಡಕ್ಕೆ ಚಲಿಸಿ ರಸ್ತೆಯಿಂದ ಕೆಳಗೆ ಇಳಿದಿದೆ. ಪುನಃ ರಸ್ತೆಗೆ ತಿರುಗಿಸುವ ವೇಳೆ ನಿಯಂತ್ರಣ ತಪ್ಪಿ ಎಡಕ್ಕೆ ವಾಲಿ ರಸ್ತೆಗೆ ಬಿದ್ದಿದೆ. ಇದರಿಂದ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ನಳಿನಿ ಅವರ ತಲೆಗೆ ಜಜ್ಜಿದ ರೀತಿಯ ಗಾಯವಾಗಿದೆ. ಅದೇ ಆಟೋರಿಕ್ಷಾದಲ್ಲಿ ಚಿಕಿತ್ಸೆಗಾಗಿ ಕರೆದುಕೊಂಡು ಆಸ್ಪತ್ರೆಗೆ ಕೊಂಡೊಯ್ದಿದ್ದು, ಅಷ್ಟರಲ್ಲಿ ಅವರು ಮೃತಪಟ್ಟಿದ್ದರು. ಕದ್ರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net