

ಮಂಗಳೂರು: ಪಂಪ್‌ವೆಲ್‌ನ ಎಂ ಐ.ಒ ಸ್ಪೆಶಾಲಿಟಿ ಕ್ಯಾನ್ಸರ್ ಆಸ್ಪತ್ರೆಯ ಮುಂದಾಳತ್ವದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಬ್ಲಡ್ ಸೆಂಟರ್ ಮಂಗಳೂರು ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಸಹಯೋಗದಲ್ಲಿ ರಕ್ತದಾನ ಶಿಬಿರ ನಡೆಯಿತು.
ರೆಡ್ ಕ್ರಾಸ್ ಸಲಹಾಗಾರರು ಹಾಗೂ ದ.ಕ ಮಾಜಿ ಅಪರ ಜಿಲ್ಲಾಧಿಕಾರಿ ಪ್ರಭಾಕರ್ ಶರ್ಮ ಮಾತನಾಡಿ, ರಕ್ತ ಕ್ಕೆ ಪರ್ಯಾಯ ಈ ಜಗತ್ತಿನಲ್ಲಿ ಯಾವುದೂ ಇಲ್ಲ. ಜಾತಿ ಮತದ ಹಂಗಿಲ್ಲ. ಆದುದರಿಂದ ಮಾನವ ಸಂಬಂಧಗಳನ್ನು ಬೆಸೆಯುವ ರಕ್ತದಾನ ಮಾಡಲು ಪ್ರತಿಯೊಬ್ಬರೂ ಮುಂದೆ ಬರಬೇಕು. ಈ ನಿಟ್ಟಿನಲ್ಲಿ ಎಂ.ಐ.ಒ ಸ್ಪೆಶಾಲಿಟಿ ಕ್ಯಾನ್ಸರ್ ಆಸ್ಪತ್ರೆ ಯಶಸ್ವಿಯಾಗಿ ಈ ಶಿಬಿರ ಆಯೋಜಿಸಿರುವುದು ಅಲ್ಲದೆ ಎಂ. ಐ .ಒ ದ ಹೆಚ್ಚಿನ ಸಿಬ್ಬಂದಿಗಳು ರಕ್ತದಾನ ಮಾಡಿರುವುದು ಅತ್ಯಂತ ಸ್ತುತ್ಯಾರ್ಹ ಎಂದರು.
ಎಂ.ಐ.ಒ ನಿರ್ದೇಶಕರು ಹಾಗೂ ಕ್ಯಾನ್ಸರ್ ತಜ್ಞರಾದ ಡಾ.ಡಿ.ಸುರೇಶ್ ರಾವ್ ಮಾತನಾಡಿ, ಜೀವ ಉಳಿಸಲು ಇರುವ ಏಕೈಕ ಅವಕಾಶವೆಂದರೆ ಅದು ರಕ್ತದಾನ. ರಕ್ತ ನೀಡುವ ಬಗ್ಗೆ ಹಿಂಜರಿಕೆ ಸಲ್ಲದು ಎಂದರು.
ಹೆಚ್ಚಿನ ಸಂಖ್ಯೆಯ ಎಂ.ಐ.ಒ ಸಿಬ್ಬಂದಿ ಸಹಿತ ಶಿಬಿರದಲ್ಲಿ 100 ಕ್ಕೂ ಅಧಿಕ ಮಂದಿ ರಕ್ತದಾನ ಮಾಡಿದರು.
ರೆಡ್ ಕ್ರಾಸ್ ಜಿಲ್ಲಾ ಸಂಯೋಜಕ ಪ್ರವೀಣ್ ಕುಮಾರ್ ಶಿಬಿರ ಆಯೋಜಿಸಿದ್ದರು. ಎಂ.ಐ.ಒ ಆಸ್ಪತ್ರೆಯ ಕ್ಯಾನ್ಸರ್ ತಜ್ಞ ಡಾ.ಹೇಮಂತ್ ಕುಮಾರ್ ಹಾಗೂ ಡಾ.ವೆಂಕಟರಮನ್ ಕಿಣಿ ಉಪಸ್ಥಿತರಿದ್ದು, ಶಿಬಿರ ಆಯೋಜನೆಯಲ್ಲಿ ಮಾರ್ಗದಶನ ನೀಡಿದ್ದರು. ರಾಜೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು, ವಿಜಯ ವಂದಿಸಿದರು.