

ಮಂಗಳೂರು: ಮೇರಿಹಿಲ್‌ನ ಗುರು ನಗರದ ಗೋವಿಂದ ಪೈ ಉದ್ಯಾನವನದಲ್ಲಿ ಭಾನುವಾರ ವನ ಮಹೋತ್ಸವ ಆಚರಿಸಲಾಯಿತು.
ಪೃಥ್ವಿ ಸ್ವಯಂ ಸೇವಕರು ಟ್ರಸ್ಟಿನ ಅಧ್ಯಕ್ಷೆ ಲೋಲಾಕ್ಷಿ, ಪರಿಸರವಾದಿ ಕೃಷ್ಣಪ್ಪ, ಮಾಜಿ ಯೋಧ ರಾಮಚಂದ್ರ ಭಟ್ಟ, ಅಕ್ಷಯ್, ಪ್ರಕಾಶ್, ಅಲ್ಬೆನ್ ಮತ್ತು ಜಿ ಜೆ ಎಸ್‌ನ ಸದಸ್ಯರಾದ ಭರತ್ ಜಿ.ಕೆ., ನಾರಾಯಣ ಕೆಲೋತ್, ಜಯಪ್ರಕಾಶ ಜೆ, ವಸಂತ್ ರಾವ್ ಮೊದಲಾದವರು ಭಾಗವಹಿಸಿದ್ದರು.
ಪರಿಸರವಾದಿ ಕೃಷ್ಣಪ್ಪ ಬೋಂದೆಲ್ ಅವರು ಬೆಳೆಸಿದ ಹತ್ತಕ್ಕಿಂತಲೂ ಅಧಿಕ ಗಿಡಗಳನ್ನು ನೆಡಲಾಯಿತು. ಈ ಸಂದರ್ಭ ಮಾತನಾಡಿದ ಅವರು ಮರೆಯದಿರು ಮಾನವ ಪ್ರಕೃತಿ ಕೊಟ್ಟ ದಾನವ, ಕಾದಿಗೆ ಕಂಟಕ ಮುಂದೊಂದು ದಿನ. ಆದ್ದರಿಂದ ಎಲ್ಲರೂ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.