ಮಂಗಳೂರು ಸರೋಜಿನಿ ಮಧುಸೂದನ ಕುಶೆ ಕಾಲೇಜಿನಲ್ಲಿ ವಿದಾಯ ಕೂಟ

mng--13 Feb Kushe school
Published on

ಮಂಗಳೂರು: ನಗರದ ಸರೋಜಿನಿ ಮಧುಸೂದನ ಕುಶೆ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ಜರುಗಿತು.

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಹಣತೆ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಾಂಶುಪಾಲ ಬಿಂದುಸಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉತ್ತಮ ರೀತಿಯಲ್ಲಿ ಅಧ್ಯಯನ ನಡೆಸಿ ಮುಂಬರುವ ಪರೀಕ್ಷೆಗಳಲ್ಲಿ ಗರಿಷ್ಠ ಅಂಕ ಗಳಿಸಿ ತೇರ್ಗಡೆಯಾಗಬೇಕೆಂದು ಶುಭ ಹಾರೈಸಿದರು.

ಕೆನರಾ ಕಾಲೇಜಿನ ಪ್ರಾಂಶುಪಾಲೆ ಡಾ.ವಿ ಪ್ರೇಮಲತಾ ಮುಖ್ಯ ಅತಿಥಿಯಾಗಿದ್ದರು. ಪಿಯುಸಿ ವಿದ್ಯಾಭ್ಯಾಸ ನಿಮ್ಮ ಮುಂದಿನ ವೃತ್ತಿಪರ ಶಿಕ್ಷಣಕ್ಕೆ ಉತ್ತಮ ವೇದಿಕೆಯಾಗುತ್ತದೆ. ಇಲ್ಲಿನ ಅಂಕಗಳು ನಿಮ್ಮ ಮುಂದಿನ ವಿದ್ಯಾಭ್ಯಾಸಕ್ಕೆ ಭರವಸೆಯ ಅಂಕಣವಾಗಲಿ. ವಿದ್ಯಾಭ್ಯಾಸದ ಜೊತೆಗೆ ಶಿಸ್ತಿನ ಶಿಕ್ಷಣಕ್ಕೆ ಒತ್ತು ನೀಡುವ ಈ ಶಾಲೆಯ ಕಾರ್ಯಕ್ರಮದ ಬಗ್ಗೆ ನನಗೆ ಹೆಮ್ಮೆ ಇದೆ. ಇಲ್ಲಿನ ಮಕ್ಕಳಲ್ಲಿ ಶಿಸ್ತು, ಸಂಯಮ ಸಂಸ್ಕೃತಿ ಎದ್ದು ಕಾಣುತ್ತದೆ ಎಂದರು.

ವಿದ್ಯಾರ್ಥಿನಿ ದಿವ್ಯ ಸ್ವಾಗತಿಸಿದರು, ತನ್ಮಯಿ ವಂದಿಸಿದರು, ಅನ್ವಿತಾ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು, ಸಂಸ್ಥೆಯ ಟ್ರಸ್ಟಿ ವಸಂತಿ ಹೊಸಬೆಟ್ಕರ್ ಅವರು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆಯನ್ನು ನೀಡಿದರು.

ಸಂಸ್ಥೆಯ ಎ.ಓ ಮುರಳೀಧರ್ ರಾವ್, ಉಪ ಪ್ರಾಂಶುಪಾಲೆ ಪವಿತ್ರ ಭಗವಾನ್ ಹಾಗೂ ಸಂಸ್ಥೆಯ ಉಪನ್ಯಾಸಕ ವೃಂದದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net