ಅಂಗನವಾಡಿಗೆ ಮಕ್ಕಳನ್ನು ಕರೆ ತರಲು ಹೋದ ಯುವತಿ ನಾಪತ್ತೆ

mng--20 sep Zuleka katoon
Published on


ಮಂಗಳೂರು: ಮುಡಿಪು ಪ್ರಜ್ಞಾಸ್ವಾಧಾರ ಗೃಹದಲ್ಲಿ ಇದ್ದ ಜುಲೇಖಾ ಖಾಟೂನ್ (22) ಎಂಬ ಯುವತಿಯು ಗುರುವಾರ ಕುರ್ನಾಡು ಅಂಗನವಾಡಿಯಿಂದ ಮಕ್ಕಳನ್ನು ಕರೆ ತರುವುದಾಗಿ ಹೋದವಳು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಪಶ್ಚಿಮ ಬಂಗಾಲ ಮೂಲದ ಇವರು ಬಿಕ್ಷಾಟಣೆ ಪ್ರಕರಣದಲ್ಲಿ ಸಂಸ್ಥೆಯ ಆಶ್ರಯದಲ್ಲಿದ್ದರು.


ಚಹರೆ :- ಎತ್ತರ 5.0 ಅಡಿ, ಎಣ್ಣೆ ಕಪ್ಪು ಮೈ ಬಣ್ಣ, ಕೋಲು ಮುಖ, ಸಾಧಾರಣ ಶರೀರ ಹೊಂದಿದ್ದು, ತಿಳಿ ಬಣ್ಣದ ಟಾಪ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಬಂಗಾಳಿ ಮತ್ತು ಹಿಂದಿ ಭಾಷೆ ಮಾತನಾಡುತ್ತಾರೆ.


ಕಾಣೆಯಾದ ಯುವತಿಯ ಬಗ್ಗೆ ಮಾಹಿತಿ ಲಭ್ಯವಾದಲ್ಲಿ ಮಂಗಳೂರು ನಗರ, ಪೊಲಿಸ್ ಆಯುಕ್ತರ ಕಚೇರಿ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 0824-2220800 ಅಥವಾ ಕೊಣಾಜೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 0824-2220536, 9480802350 ಸಂಪರ್ಕಿಸುವಂತೆ ಕೊಣಾಜೆ ಪೊಲೀಸ್ ಠಾಣಾ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net