

ಮಂಗಳೂರು: ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಬಾವುಟಗುಡ್ಡೆ ಆವರಣದ ಶಿಕ್ಷಕೇತರ ಉದ್ಯೋಗಿಗಳ ವತಿಯಿಂದ ಇತ್ತೀಚೆಗೆ ಕಾಲೇಜಿನ ಸಭಾಂಗಣದಲ್ಲಿ ‘ಆಟಿದ ನೆಂಪು’ ಕಾರ್ಯಕ್ರಮ ಜರಗಿತು.
ಮಾಹೆ ವಿವಿಯ ಮಂಗಳೂರು ಕ್ಯಾಂಪಸ್ಸಿನ ಸಹ ಕುಲಪತಿ ಡಾ.ದಿಲೀಪ್ ಜಿ.ನಾಯಕ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳ ನಡುವೆ ಸೌಹಾರ್ದಯುತ ಸಂಬಂಧ ಬೆಳೆಸಲು ಇಂತಹ ಕಾರ್ಯಕ್ರಮಗಳು ಪೂರಕ ಎಂದರು.
ಮುಖ್ಯ ಅತಿಥಿಯಾಗಿದ್ದ ಕೆಎಂಸಿ ಡೀನ್ ಡಾ.ಬಿ.ಉಣ್ಣಿಕೃಷ್ಣನ್ ಅವರು ಮಾತನಾಡಿ, ತುಳುನಾಡಿನ ವಿಶಿಷ್ಟ ಸಂಪ್ರದಾಯ ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮ ಶ್ಲಾಘನೀಯ ಎಂದರು.
ಮಂಗಳೂರಿನ ಮಣಿಪಾಲ್ ದಂತ ವೈದ್ಯಕೀಯ ಕಾಲೇಜಿನ ಡೀನ್ ಡಾ.ಅಶಿತಾ ಉಪ್ಫೂರ್, ಕೆಎಂಸಿಯ ಅಸೋಸಿಯೇಟ್ ಡೀನ್ಗಳಾದ ಡಾ.ಸುರೇಶ್ ಕುಮಾರ್ ಶೆಟ್ಟಿ, ಡಾ.ಪ್ರಮೋದ್ ಕುಮಾರ್, ಡಾ.ಶ್ರೀಕಲಾ ಬಾಳಿಗ, ಕೆಎಂಸಿ ಕಚೇರಿಯ ಕಾರ್ಯ ನಿರ್ವಹಣಾಧಿಕಾರಿಗಳಾದ ಮಧುಮತಿ ಎಚ್.ಎಸ್., ಹೇಮಾವತಿ ಭಂಡಾರಿ, ನರೇಂದ್ರ ಪೈ, ಸುಕನ್ಯಾ ಕುಮಾರಿ, ಯಶವಂತ್ ಕುಮಾರ್, ಸುಬೋಧ್ ಕುಮಾರ್, ಇಂಜಿನಿಯರ್ಗಳಾದ ಶಿವರಾಜ್, ಡೆಸ್ಟನ್ ವೇಗಸ್, ಹರಿಕೃಷ್ಣ ಆಳ್ವ, ರೋಸ್ ಮೇರಿ, ಲೈಬ್ರೆರಿಯನ್ ರಘುವೀರ್ ಕೆ., ಯಶೋದಾ ಕೆ., ಶಿವರಾಮ್ ಎಸ್. ಮತ್ತಿತರರು ಉಪಸ್ಥಿತರಿದ್ದರು.
ಕೆಎಂಸಿ ಆಡಳಿತ ಕಚೇರಿಯ ಮ್ಯಾನೇಜರ್ ಧಮೇರ್ಂದ್ರ ಎಂ.ಪಿ. ಸ್ವಾಗತಿಸಿದರು. ಕಾರ್ಯ ನಿರ್ವಹಣಾಧಿಕಾರಿ ಭಾನುಕಲಾ ಉದಯ್ ಆಟಿ ಖಾದ್ಯ ತಯಾರಿಸಿದ ಸಿಬ್ಭಂದಿಗಳನ್ನು ಪರಿಚಯಿಸಿದರು. ಎಚ್ಆರ್ ವಿಭಾಗದ ಅಸಿಸ್ಟೆಂಟ್ ಮ್ಯಾನೇಜರ್ ಸತೀಶ್ ಶೆಟ್ಟಿ ಕೊಡಿಯಾಲ್ಬೈಲ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸುಮಾರು 36 ಬಗೆಯ ತುಳುನಾಡಿನ ಸಾಂಪ್ರದಾಯಿಕ ಖಾದ್ಯಗಳನ್ನು ಉಣಬಡಿಸಲಾಯಿತು.