ಕಿನ್ನಿಗೋಳಿ ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ಮಾಹಿತಿ ಶಿಬಿರ

mng---21 Feb Suposhan
Published on

ಮಂಗಳೂರು: ಪ್ರಾಜೆಕ್ಟ್ ಸುಪೋಶನ್, ಅದಾನಿ ವಿಲ್ಮಾರ್ ಮತ್ತು ಅದಾನಿ ಫೌಂಡೇಶನ್ ಮಂಗಳೂರು ಇದರ ವತಿಯಿಂದ ಕಿನ್ನಿಗೋಳಿಯ ರೋಟರಿ ರಜತ ಭವನದಲ್ಲಿ ಕೆಮ್ರಾಲ್ ಮತ್ತು ಕಟೀಲು ವಲಯದ ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ಮಾಹಿತಿ ಶಿಬಿರ ನಡೆಯಿತು.

ರೋಟರಿ ಕ್ಲಬ್ ಅಧ್ಯಕ್ಷ ಧನಂಜಯ ಶೆಟ್ಟಿಗಾರ್ ಮಾತನಾಡಿ, ಆಶಾ ಕಾರ್ಯಕರ್ತೆಯರು ಮಕ್ಕಳ, ಗರ್ಭಿಣಿಯರ ಆರೋಗ್ಯ ಕಾಪಾಡುವಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಪ್ರಾಜೆಕ್ಟ್ ಸುಪೋಶನ್ ಸಂಸ್ಥೆಯ ಪ್ರೋತ್ಸಾಹ ಮಾದರಿ ಎಂದರು.

ಕೆಎಂಸಿಯ ಕಮ್ಯುನಿಟಿ ಮೆಡಿಸಿನ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಮಿಥುನ್ ಸಂಪನ್ಮೂಲ ವ್ಯಕ್ತಿಯಾಗಿದ್ದರು. 1000 ದಿನಗಳ ಜೀವನ ಚಕ್ರ, ಪೌಷ್ಠಿಕತೆ, ಅಪೌಷ್ಠಿಕತೆ, ಸ್ತನ್ಯಪಾನ ಮತ್ತು ಅಗತ್ಯತೆಗಳು, ಅಪೌಷ್ಠಿಕತೆಯ ಪುನರ್ವಸತಿ ಕೇಂದ್ರ ಮೊದಲಾದ ವಿಚಾರಗಳ ಬಗ್ಗೆ ಮಾಹಿತಿ ನೀಡಿದೆರು.

ಕಟೀಲು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಭಾಸ್ಕರ ಕೋಟ್ಯಾನ್, ಅತ್ತೂರು ಕೆಮ್ರಾಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ.ಏನ್ಸಿಲಾ ಪತ್ರಾವೋ, ರೋಟರಿ ಕ್ಲಬ್ ಅಸಿಸ್ಟೆಂಟ್ ಗವರ್ನರ್ ಶರತ್ ಶೆಟ್ಟಿ ಮೊದಲಾದವರಿದ್ದರು.

ಅದಾನಿ ಫೌಂಡೇಶನ್‌ನ ಸುಪೋಶನ್ ಅಧಿಕಾರಿ ಡಾ.ಪ್ರೇಮಾ ಡಿಸೋಜ ಸ್ವಾಗತಿಸಿ, ಪ್ರಸ್ತಾವನೆಗೈದರು. ಸಹಾಯಕ ಅಧಿಕಾರಿ ಚೈತ್ರಾ ಕಾರ್ಯಕ್ರಮ ನಿರೂಪಿಸಿದರು. 40 ಆಶಾ ಕಾರ್ಯಕರ್ತೆಯರು, ಸಂಗಿಣಿಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net