ಕಾವೂರು ಶ್ರೀ ಮಹಾಲಿಂಗೇಶ್ವರ ದೇವರ ಬಾಲಾಲಯ ಪ್ರತಿಷ್ಠೆ

MNG--20 nov Kavoor temple
Published on

ಮಂಗಳೂರು: ಕಾವೂರು ಶ್ರೀ ಮಹಾಲಿಂಗೇಶ್ವರ ದೇವಳದ ಬ್ರಹ್ಮಕಲಶೋತ್ಸವ ಮಾ.1ರಿಂದ 9ರ ತನಕ ನಡೆಯಲಿದ್ದು, ಗರ್ಭಗುಡಿಯ ಜೀರ್ಣೋದ್ಧಾರ ಹಿನ್ನೆಲೆಯಲ್ಲಿ ದೇವರ ಬಾಲಾಲಯ ಪ್ರತಿಷ್ಠೆ ಬುಧವಾರ ನಡೆಯಿತು.

ಕುಡುಪು ನರಸಿಂಹ ತಂತ್ರಿ, ಕೃಷ್ಣರಾಜ ತಂತ್ರಿ ಅವರ ನೇತೃತ್ವದಲ್ಲಿ ಕಾವೂರು ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಶ್ರೀನಿವಾಸ್ ಭಟ್ ಅವರ ಉಪಸ್ಥಿತಿಯಲ್ಲಿ ಪ್ರಾತಃಕಾಲ 7 ಗಂಟೆಯಿಂದ ಸಂಹಾರತತ್ವ ಹೋಮ, ಸಂಹಾರತತ್ವ ಕಲಶ, ಕಲಾಶಾಭಿಷೇಕ ಸಂಕೋಚ ಪ್ರಕ್ರಿಯೆ, ಜೀವಕಲಶ ಪೂಜೆ, ಜೀವೋದ್ವಾಸನೆ. 11.30ಕ್ಕೆ ಮಕರಲಗ್ನ ಸುಮುಹೂರ್ತದಲ್ಲಿ ಶ್ರೀ ದೇವರ ಬಾಲಾಲಯ ಪ್ರತಿಷ್ಠೆ ಕಲಶಾಭಿಷೇಕ, ಪ್ರಸನ್ನ ಪೂಜೆ ನಡೆಯಿತು.

ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರಾದ ಅಜಿತ್ ಕುಮಾರ್ ರೈ ಮಾಲಾಡಿ, ಡಾ.ವೈ.ಭರತ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಮೋಹನ ಪ್ರಭು, ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಆಶಿಕ್ ಬಲ್ಲಾಳ್, ಪ್ರ.ಕಾರ್ಯದರ್ಶಿ ಸುಧಾಕರ ಆಳ್ವ, ಕಾರ್ಯಾಧ್ಯಕ್ಷ ಅವಿನಾಶ್ ನಾಕ್, ಕೊಶಾಧಿಕಾರಿ ದೀಪಕ್ ಪೂಜಾರಿ, ಮಾರ್ಗದರ್ಶಕ ರಾಮಣ್ಣ ಶೆಟ್ಟಿ ಮುಗಿಪು, ಟ್ರಸ್ಟಿಗಳಾದ ಕೆ.ಸದಾಶಿವ ಶೆಟ್ಟಿ, ಹರೀಶ್ ಶೆಟ್ಟಿ, ಪುರುಷೋತ್ತಮ ಎನ್.ಪೂಜಾರಿ, ಗಿರಿಜಾತೆ ಆರ್ .ಭಂಡಾರಿ, ಉಮಾನಾಥ್, ವೀಣಾ ಆಚಾರ್, ಆರ್ಥಿಕ ಸಮಿತಿಯ ಪ್ರಸನ್ನ ಭಟ್ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net