ಕಾಟಿಪಳ್ಳ ಕ.ಸಾ.ಪ. ‘ಸಾಹಿತ್ಯ ಸಿರಿ’ ಕಾರ್ಯಕ್ರಮ

mng--23 june katipalla sahithya siri
Published on

ಮಂಗಳೂರು: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕ, ಸುರತ್ಕಲ್ ಹೋಬಳಿ ಘಟಕದ ‘ಸಾಹಿತ್ಯ ಸಿರಿ’ ಕಾರ್ಯಕ್ರಮ ಶನಿವಾರ ಕಾಟಿಪಳ್ಳ ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.


‘ಅಮೃತ ಪ್ರಕಾಶ’ ಸಂಪಾದಕಿ ಮಾಲತಿ ಶೆಟ್ಟಿ ಮಾಣೂರು ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷ ಪಿ.ದಯಾಕರ್ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಸಾಹಿತಿ ರೇಮಂಡ್ ಡಿಕುನ್ಹ ಪಾಲ್ಗೊಂಡಿದ್ದರು. ಮಕ್ಕಳಿಗೆ ಕಥೆ ಕಟ್ಟುವ ವಿಧಾನ ಹಾಗೂ ಅವುಗಳು ತೆರೆದುಕೊಳ್ಳುವಂತಹ ಕುತೂಹಲದ ಬಾಗಿಲು ಹೇಗಿರಬೇಕು ಎಂದು ತಿಳಿಸಿ ಕೊಟ್ಟರು.


ಸಂಸ್ಥೆಯ ಆಡಳಿತ ಅಧಿಕಾರಿ ಡಾ.ಗಣೇಶ್ ಅಮೀನ್ ಸಂಕಮಾರ್, ಎಂ.ಆರ್.ಪಿ.ಎಲ್ ವಿಶ್ರಾಂತ ಪ್ರಬಂಧಕ ವೀಣಾ ಶೆಟ್ಟಿ, ತಾಲೂಕು ಕ.ಸಾ.ಪ ಅಧ್ಯಕ್ಷ ಮಂಜುನಾಥ ಎಸ್. ರೇವಣ್ ಕರ್ ಶುಭ ಹಾರೈಸಿದರು.


ಕ.ಸಾ.ಪ. ಸುರತ್ಕಲ್ ಹೋಬಳಿ ಘಟಕದ ಅಧ್ಯಕ್ಷೆ, ಸಂಸ್ಥೆಯ ಮುಖ್ಯಸ್ಥೆ ಗುಣವತಿ ರಮೇಶ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
ಕವಯತ್ರಿ ಅನುರಾಧ ರಾಜೀವ್, ಲಲಿತ ಪದ್ಮಿನಿಯವರಿಂದ ಸ್ವರಚಿತ ಕವನ ವಾಚನ ನಡೆಯಿತು. ಶ್ರೀ ನಾರಾಯಣ ಗುರು ಸಮೂಹ ಸಂಸ್ಥೆಗಳ ಮುಖ್ಯಸ್ಥರುಗಳು, ಶಿಕ್ಷಕರು, ಸುಮಾರು 200ಕ್ಕೂ ಹೆಚ್ವು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.


ಶಿಕ್ಷಕಿ ರೇಣುಕಾ ವಂದಿಸಿ, ಕ.ಸಾ.ಪ ಸುರತ್ಕಲ್ ಹೋಬಳಿ ಘಟಕದ ಗೌರವ ಕಾರ್ಯದರ್ಶಿ, ಶಿಕ್ಷಕಿ ಅಕ್ಷತಾ ಕೇಶವ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net