ಕದ್ರಿ ಮನೆಯಿಂದ ಕಳವು

FIR-2
Published on


ಮಂಗಳೂರು: ಕದ್ರಿ ಜಾರ್ಜ್ ಮಾರ್ಟಿಸ್ ರೋಡ್‌ನ ಬಾಡಿಗೆ ಮನೆಯಿಂದ ನಗದು ಹಣ ಮತ್ತು ಬೆಳ್ಳಿಯ ಸೊತ್ತುಗಳನ್ನು ಕಳವು ಮಾಡಲಾಗಿದೆ.


ಬಾಡಿಗೆ ಮನೆಯಲ್ಲಿದ್ದವರು ಡಿ.14ರಂದು ಮೈಸೂರಿಗೆ ತೆರಳಿದ್ದರು. ಜ.16ರಂದು ವಾಪಸ್ ಬಂದಾಗ ಬಾಗಿಲಿನ ಲಾಕ್ ಮುರಿದಿತ್ತು. ಒಳಗೆ ಹೋಗಿ ನೋಡಿದಾಗ ಕಪಾಟಿನ ಲಾಕ್‌ನಲ್ಲಿದ್ದ 70,000 ರೂ. ನಗದು, ವಾರ್ಡ್‌ರೋಬ್‌ನ ಸೂಟ್‌ಕೇಸ್‌ನಲ್ಲಿದ್ದ 2 ಬೆಳ್ಳಿಯ ಬಟ್ಟಲು, 1 ಬೆಳ್ಳಿ ಕಲಶ, 1 ಬೆಳ್ಳಿ ಚಮಚ, 1 ಬೆಳ್ಳಿ ಕಪ್, 20 ಬೆಳ್ಳಿ ನಾಣ್ಯಗಳು, ಬೆಳ್ಳಿಸರ, ಬೆಳ್ಳಿಯ ದೀಪ ಸಹಿತ ಸುಮಾರು 56,000 ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಕದ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net