

ಮಂಗಳೂರು: ಮೇರಿಹಿಲ್‌ನ ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್‌ನ 8ನೇ ತರಗತಿಯ ವಿದ್ಯಾರ್ಥಿನಿ ಜೆಸ್ನಿಯಾ ಕೊರಿಯಾ ರೋಲರ್ ಸ್ಕೇಟಿಂಗ್‌ನಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿ ಸತತ 5 ನೇ ವರ್ಷ 500 ಮೀಟರ್ ರಿಂಕ್ ಓಟದಲ್ಲಿ ಚಿನ್ನದ ಪದಕ ಪಡೆದಿದ್ದಾರೆ.
ಅ.23 ರಿಂದ ಬೆಳಗಾವಿಯ ಗುಡ್ ಶೆಫರ್ಡ್ ಸೆಂಟ್ರಲ್ ಸ್ಕೂಲ್‌ನಲ್ಲಿ ನಡೆದ ಅಂತರಾಷ್ಟ್ರೀಯ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಈ ಸಾಧನೆ ಮಾಡಿದ್ದಾರೆ. ಈಗಾಗಲೇ 2019, 2021, 2022 ಮತ್ತು 2023 ರಲ್ಲಿ ರಾಷ್ಟ್ರೀಯ ಮಟ್ಟದ ಚಿನ್ನದ ಪದಕ ವಿಜೇತೆ, ಜೆಸ್ನಿಯಾ ಈ ವರ್ಷವೂ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗೆದ್ದು ಸತತ 5 ನೇ ಚಿನ್ನದ ಪದಕವನ್ನು ಗೆದ್ದಿರುತ್ತಾರೆ. ಜೆಸ್ನಿಯಾ ಪ್ರಸ್ತುತ ಹಾಯ್ ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್, ಸ್ಕೇಟ್ ಸಿಟಿ, ಅಶೋಕ ನಗರದಲ್ಲಿ ತರಬೇತುದಾರರಾದ ಮೋಹನ್ ಮತ್ತು ರಮಾನಂದ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಆಕೆಯ ಪೋಷಕರು, ಬಿಜೈನ ಜೆರೋಮ್ ಕೊರೆಯಾ ಮತ್ತು ಪ್ರೀತಾ ಕೊರೆಯಾ.