ಮಂಗಳೂರು: ಜಿಲ್ಲಾ ಕಾರಾಗೃಹದಲ್ಲಿ ತಪಾಸಣೆ ವೇಳೆ ಮೊಬೈಲ್, ಚಾರ್ಜರ್ ಹಾಗೂ ಇತರ ವಸ್ತುಗಳು ಪತ್ತೆಯಾಗಿದೆ.
ಜೈಲಿನ ಅಧಿಕಾರಿಗಳು ಮತ್ತು ಸಿಬಂದಿ ಸೋಮವಾರ ಮಧ್ಯಾಹ್ನ ತಪಾಸಣೆ ಕೈಗೊಂಡಾಗ ವಿಭಾಗದ 3ನೇ ಕೊಠಡಿಯ ಶೌಚಾಲಯ ಬಳಿ 1-ನೋಕಿಯಾ ಕೀ ಪ್ಯಾಡ್ ಮೊಬೈಲ್, 1 ಕಪ್ಪು ಬಣ್ಣದ ಮೊಬೈಲ್ ಚಾರ್ಜರ್, 1-ಮೊಬೈಲ್ ಬ್ಯಾಟರಿ, 1- ಬಿಳಿ ಬಣ್ಣದ ಚಾರ್ಜರ್ ವಯರ್, ಬಿಳಿ ಬಣ್ಣದ ಚಾರ್ಜರ್ ಪಿನ್ ಪತ್ತೆಯಾಗಿದೆ.
ಜೈಲು ಅಧೀಕ್ಷಕರಾಗಿರುವ ಎಂ.ಎಚ್. ಆಶೇಖಾನ್ ಅವರು ಈ ಬಗ್ಗೆ ಬರ್ಕೆ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.