

ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು 2023-24ನೇ ಸಾಲಿನಲ್ಲಿ 20.19 ಲಕ್ಷ ಪ್ರಯಾಣಿಕರನ್ನು ನಿರ್ವಹಿಸಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.12.5ರಷ್ಟು ಏರಿಕೆಯಾಗಿದೆ.
14.08 ಲಕ್ಷ ದೇಶೀಯ ಪ್ರಯಾಣಿಕರು ಹಾಗೂ6.10 ಲಕ್ಷ ಅಂತರರಾಷ್ಟ್ರೀಯ ಪ್ರಯಾಣಿಕರು ಈ ನಿಲ್ದಾಣ ಬಳಸಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ದೇಶೀಯ ಪ್ರಯಾಣಿಕರ ಸಂಖ್ಯೆ ಶೇ.16.5ರಷ್ಟಿ ಹೆಚ್ಚಾಗಿದೆ.
2023 ಡಿಸೆಂಬರ್ನಲ್ಲಿ ವಿಮಾನ ನಿಲ್ದಾಣವು 2.03 ಲಕ್ಷ ಪ್ರಯಾಣಿಕರನ್ನು ನಿರ್ವಹಿಸಿ ದಾಖಲೆ ನಿರ್ಮಿಸಿತ್ತು. ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು 2024ರ ಮಾರ್ಚ್ ತಿಂಗಳಲ್ಲಿ 1,550 ಎಟಿಎಂಗಳನ್ನು ನಿರ್ವಹಿಸಿದೆ.
ಚೆನ್ನೈ-ಮಂಗಳೂರು ವಿಮಾನ: ಏರ್ ಇಂಡಿಯಾ ಎಕ್ಸ್ಪ್ರೆಸ್ ಮಾ.31ರಂದು ಚೆನ್ನೈ-ಮಂಗಳೂರು ನಡುವೆ ಬೆಂಗಳೂರು ಮೂಲಕ ಸಂಪರ್ಕ ಸಾಧಿಸುವ ಕಿರಿದಾದ ಬೋಯಿಂಗ್ 737 ಮ್ಯಾಕ್ಸ್ ಏಕಮುಖ ಮಾರ್ಗವನ್ನು ಆರಂಭಿಸಿದೆ. ಐಎಕ್ಸ್ 782 ಚೆನ್ನೈಯಿಂದ ಬೆಳಗ್ಗೆ 9.45ಕ್ಕೆ ಹೊರಟು 10.40ಕ್ಕೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ ಬೆಳಗ್ಗೆ 11.15ಕ್ಕೆ ಹೊರಡುವ ವಿಮಾನ ಮಧ್ಯಾಹ್ನ 12.15ಕ್ಕೆ ಮಂಗಳೂರು ತಲುಪಲಿದೆ.
ಬೇಸಿಗೆಯಲ್ಲಿ ಇಂಡಿಗೋ ಎಟಿಆರ್ಗಳನ್ನು ಬಳಸಿಕೊಂಡು ಚೆನ್ನೈಗೆ ಎರಡು ನೇರ ದೈನಂದಿನ ವಿಮಾನಗಳನ್ನು ನಿರ್ವಹಿಸುತ್ತಿದೆ ಎಂದು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.