ಮಂಗಳೂರು ಅಂ.ರಾ. ವಿಮಾನ ನಿಲ್ದಾಣ ಪ್ರಯಾಣಿಕರ ಸಂಖ್ಯೆ ಶೇ.21ರಷ್ಟು ಏರಿಕೆ

airport
Published on

ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆಯು 2024-25ರ ಹಣಕಾಸು ವರ್ಷದ ಮೊದಲ ತ್ರೈ ಮಾಸಿಕದಲ್ಲಿ ಕಳೆದ ಬಾರಿಗಿಂತ ಶೇ.21ರಷ್ಟು ಏರಿಕೆ ಕಂಡಿದೆ.


3,93,598 ದೇಶೀಯ ಹಾಗೂ 1,59,091 ಅಂತಾರಾಷ್ಟ್ರೀಯ ಸಹಿತ ಒಟ್ಟು 5,52,689 ಪ್ರಯಾಣಿಕರು ಪ್ರಯಾಣಿಸಿದ್ದಾರೆ. 2023-24ರ ಮೊದಲ ತ್ರೈ ಮಾಸಿಕದಲ್ಲಿ 4,57,859 ಮಂದಿ ಪ್ರಯಾಣಿಸಿದ್ದರು. ವಿಮಾನ ನಿಲ್ದಾಣವು ಈಗ ಮಾಸಿಕ 1,80,000ಕ್ಕೂ ಹೆಚ್ಚು ಪ್ರಯಾಣಿಕರನ್ನು ನಿರ್ವಹಿಸುತ್ತಿದೆ. ದುಬಾಯು ಹೆಚ್ಚು ಪ್ರಯಾಣಿಸುವ ಅಂತಾರಾಷ್ಟ್ರೀಯ ತಾಣವಾಗಿದ್ದರೆ, ಬೆಂಗಳೂರು ಹಾಗೂ ಮುಂಬಯಿ ದೇಶೀಯ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ.


ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಬುದಾಬಿ, ಬಹ್ರೈನ್, ದಮಾಮ್, ದುಬಾ, ದೋಹಾ, ಜೆಡ್ಡಾ, ಕುವೈಟ್ ಮತ್ತು ಮಸ್ಕತ್ ಸಹಿತ 8 ಅಂತಾರಾಷ್ಟ್ರೀಯ ಸ್ಥಳಗಳಿಗೆ ಸೇವೆಗಳನ್ನು ಒದಗಿಸುತ್ತಿದೆ. ದೇಶೀಯವಾಗಿ ಬೆಂಗಳೂರು, ಚೆನ್ನೈ, ನವದೆಹಲಿ, ಹೈದರಾಬಾದ್, ಮುಂಬಯಿ ಮತ್ತು ಪುಣೆ ನಗರಗಳಿಗೆ ಸಂಪರ್ಕ ಒದಗಿಸುತ್ತದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಜು.22ರಿಂದ ಮಂಗಳೂರು-ಅಬುದಾಬಿ ನಡುವೆ ದೈನಂದಿನ ಸೇವೆ ಆರಂಭಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net