

ಮಂಗಳೂರು: ಉರ್ವಾ ಪೊಲೀಸ್ ಠಾಣೆಯಲ್ಲಿ ಕೋಡಿಕ್ಕಲ್ ವಿವೇಕಾನಂದ ನಗರ ಎಂಬಲ್ಲಿ ನಡೆದ ಮನೆಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಬಂಧಿತರನ್ನು ವೆಂಕಟೇಶ್ ವೆಂಕಿ (21), ಸಾಗರ್ (21) ಮತ್ತು ರಂಜಿತ್ (20) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಳ ತಾಲೂಕು ಗಂಗೌಡನಹಳ್ಳಿ ಎಂಬಲ್ಲಿ ವಶಕ್ಕೆ ಪಡೆದು ಆರೋಪಿಗಳಿಂದ ಕಳವು ಮಾಡಿದ ಚಿನ್ನಾಭರಣಗಳು ಸುಮಾರು 4,64,750 ರೂ ಮೌಲ್ಯದ ಚಿನ್ನಾಭರಣಗಳನ್ನು ಮತ್ತು ಕೃತ್ಯಕ್ಕೆ ಬಳಸಿದ ಸ್ಕೂಟರ್ ಅನ್ನು ಸ್ವಾಧೀನ ಪಡಿಸಿಕೊಂಡಿದೆ.
ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗಳಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ. ಉರ್ವಾ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಭಾರತಿ ರವರ ತಂಡ ಹರೀಶ್ ಹೆಚ್ ವಿ, ಪಿಎಸ್, ಅನಿತಾ ಹೆಚ್.ಬಿ, ಪಿ.ಎಸ್.ಐ, ವಿನಯ್ ಕುಮಾರ್ ಎಎಸ್, ಮತ್ತು ಸಿಬ್ಬಂದಿಗಳಾದ ಪುಷ್ಟರಾಜ್, ರಾಮಚಂದ್ರ, ಸತೀಶ್ ಹೆಚ್.ಕೆ, ಪ್ರಮೋದ್.ಕೆ, ವೆಂಕಟೇಶ್, ಅಭಿಷೇಕ್, ಬಾಸ್ಕರ್, ಯಲ್ಲಾಲಿಂಗ, ಮಮತಾ, ಚಂದ್ರಹಾಸ್, ಶರತ್ ಹಾಗೂ ಮಂಗಳೂರು ನಗರ ಗಣಕಯಂತ್ರ ವಿಭಾಗದ ಸಿಬ್ಬಂದಿ ಮನೋಜ್ ರವರನ್ನೊಳಗೊಂಡ ತಂಡವು ಆರೋಪಿ ದಸ್ತಗಿರಿ ಹಾಗೂ ಸ್ವತ್ತು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.