

ಮಂಗಳೂರು: ನಗರದ ಮೇರಿಹಿಲ್‌ನಲ್ಲಿರುವ ಜಿಲ್ಲಾ ಗೃಹರಕ್ಷಕದಳ ಮತ್ತು ಪೌರರಕ್ಷಣಾ ಕಚೇರಿಯಲ್ಲಿ ಸೋಮವಾರ ಕನಕದಾಸ ಜಯಂತಿ ಆಚರಿಸಲಾಯಿತು.
ಗೃಹರಕ್ಷಕ ದಳದ ಸಮಾದೇಷ್ಟ ಡಾ. ಮುರಲೀ ಮೋಹನ್ ಚೂಂತಾರು ಮಾತನಾಡಿ, ಇಂದಿನ ಆಧುನಿಕ ಸಮಾಜಕ್ಕೆ ಕನಕದಾಸರ ತತ್ವ ಸಂದೇಶಗಳ ಅವಶ್ಯಕತೆ ಇದೆ. ಹಾಗಾಗಿ ಕನಕದಾಸರ ಜೀವನ ಸಾರ ಹಾಗೂ ಅವರ ಆದರ್ಶಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದರು.
ಜಿಲ್ಲಾ ಗೃಹರಕ್ಷಕದಳ ಕಚೇರಿಯ ಪ್ರಥಮ ದರ್ಜೆ ಸಹಾಯಕಿ ಶ್ಯಾಮಲಾ ಎ., ಕಚೇರಿ ಸಿಬ್ಬಂದಿ ಮಂಜುಳಾ ಮತ್ತು ಮಂಗಳೂರು ಘಟಕದ ಸಾಜರ್ಂಟ್ ಸುನಿಲ್ ಕುಮಾರ್, ಉಳ್ಳಾಲ ಘಟಕದ ಪ್ರಭಾರ ಘಟಕಾಧಿಕಾರಿ ಸುನಿಲ್, ಮೂಡುಬಿದರೆ ಘಟಕದ ಚಂದ್ರಶೇಖರ್, ತೃತೇಶ್ ಹಾಗೂ ಸುಲೋಚನಾ, ಖತೀಜಮ್ಮ ಉಪಸ್ಥಿತರಿದ್ದರು.