

ಮಂಗಳೂರು: ಪೃಥ್ವಿ ಸ್ವಯಂ ಸೇವಕರು ಚಾರಿಟೇಬಲ್ ಟ್ರಸ್ಟ್ ಹಾಗೂ ವ್ಯಾಲಿ ವ್ಯೆ ಪಾರ್ಕ್ ಗುರು ನಗರ ಬಡಾವಣೆ ಇದರ ಸಹಯೋಗದಲ್ಲಿ 78ನೇ ಸ್ವಾತಂತ್ರೃ ದಿನಾಚರಣೆ ಗುರು ನಗರ ಪಾರ್ಕ್‌ನಲ್ಲಿ ಜರುಗಿತು.
ಸಿಸಿಬಿ ಎಸಿಪಿ ಗೀತಾ ಕುಲಕರ್ಣಿ ಧ್ವಜಾರೋಹಣಗೈದರು. ವ್ಯಾಲಿ ವ್ಯೆ ಪಾರ್ಕ್ ಬಡವಾಣೆ ನಿವಾಸಿ ಜೋ ಟೆಲ್ಲಿಸ್, ಪರಿಸರವಾದಿ ದಿನೇಶ್ ನಾಯಕ್, ಮೂಲತ್ವ ಫೌಂಡೇಶನ್‌ನ ಸ್ಥಾಪಕ ಪ್ರಕಾಶ್ ಕೋಟ್ಯಾನ್, ಹಸಿರು ದಿಬ್ಬಣ ಸಂಸ್ಥೆ ಮುಖ್ಯಸ್ಥ ಕೇಶವ ಕಸ್ವಿ , ಪ್ರಥ್ವಿ ಟ್ರಸ್ಟ್ ಅಧ್ಯಕ್ಷೆ ಲೋಲಕ್ಷಿ ಫನಾರ್ಂಡಿಸ್ ಹಾಗೂ ಮುತ್ತೂಟ್ ಪೈನಾನ್ಸ್ ಸಿಎಸ್‌ಆರ್ ಮ್ಯಾನೇಜರ್ ಪ್ರಸಾದ್ ಕುಮಾರ್ ಅತಿಥಿಗಳಾಗಿದ್ದರು. ಗುರು ನಗರ ಪಾರ್ಕ್ ಬಡಾವಣೆಯ ನಾಗರಿಕರು ಹಾಗೂ ಪೃಥ್ವಿ ಟ್ರಸ್ಟ್ ಸದಸ್ಯರು ಉಪಸ್ಥಿತರಿದ್ದರು.