

ಮಂಗಳೂರು: ಗ್ರೇಸ್ ಮಿನಿಸ್ಟ್ರೀ ಸಂಸ್ಥೆ ವತಿಯಿಂದ ನಡೆದ ಕ್ರಿಸ್ಮಸ್ ಹಬ್ಬದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ 600ಕ್ಕೂ ಹೆಚ್ಚು ಬಡ ಕುಟುಂಬದ ಮಹಿಳೆಯರಿಗೆ ಸೀರೆ ಮತ್ತು 500ಕ್ಕೂ ಹೆಚ್ಚು ಪುರುಷರಿಗೆ ಧೋತಿ ವಿತರಿಸಲಾಯಿತು.
ಕ್ರಿಸ್ಮಸ್ ಹಬ್ಬದ ಅಂಗವಾಗಿ ಬಡ 250 ಕುಟುಂಬಗಳಿಗೆ ರೇಶನ್ ಸಾಮಗ್ರಿಗಳ ಕಿಟ್ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಸಂಸ್ಥೆಯ ಸ್ಥಾಪಕ ಆಂಡ್ರ್ಯೂ ರಿಚರ್ಡ್ ಅವರು ಕ್ರಿಸ್ಮಸ್ ಸಂದೇಶ ನೀಡಿದರು.
ಈ ಸಂದರ್ಭ ಕ್ರಿಸ್ಮಸ್ ಡ್ಯಾನ್ಸ್, ಹಾಡು, ಜೀಸಸ್ ಹುಟ್ಟಿದ ದಿನವನ್ನು ಬಿಂಬಿಸುವ ಸ್ಕಿಟ್ ಪ್ರದರ್ಶನ ಮಾಡಲಾಯಿತು. ಮಂಗಳೂರು ಹಾಗೂ ಬೆಂಗಳೂರು ನಗರದಲ್ಲಿ ಈ ಕಾರ್ಯಕ್ರಮ ನಡೆಯಿತು.