

ಮಂಗಳೂರು : ಹಂಪನಕಟ್ಟೆ ಬಳಿ ಅಮಲು ಪದಾರ್ಥ ಸೇವಿಸಿ ತೋರಾಡುತ್ತಿದ್ದ ಯುವಕನನ್ನು ಆ್ಯಂಟಿ ಡ್ರಗ್ಸ್ ಟೀಮ್‌ನ ಪಿಎಸ್‌ಐ ಪ್ರದೀಪ್ ಟಿ.ಆರ್. ಅವರ ನೇತೃತ್ವದ ಪೊಲೀಸರ ತಂಡ ವಶಕ್ಕೆ ಪಡೆದಿದೆ.
ಬಂಧಿತ ಯುವಕ ಪುತ್ತೂರು ಎಂಪಿಎಂಸಿ ರಸ್ತೆಯ ನಿವಾಸಿ ಜೋಸ್ವಿನ್ ಮಸ್ಕರೇನ್ಹಸ್ (24). ವಿಚಾರಣೆ ವೇಳೆ ಆತ ಗಾಂಜಾ ಸೇವಿಸಿರುವುದನ್ನು ಒಪ್ಪಿಕೊಂಡಿದ್ದಾನೆ. ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಟೆಟ್ರಾಹೆಡ್ರಾಕೆನಬಿನಾಯ್ಡಾ ಎನ್ನುವ ನಿಷೇಧಿತ ಮಾದಕ ದ್ರವ್ಯ ಸೇವನೆ ಮಾಡಿರುವುದು ದೃಢಪಟ್ಟಿದೆ.
ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.