

ಮಂಗಳೂರು: ನಗರದ ಕೆಎಸ್ ರಾವ್ ರೋಡ್‌ನಿಂದ ಕೋರ್ಟ್‌ಗೆ ಹೋಗುವ ರಸ್ತೆಯಲ್ಲಿ ಯಾವುದೋ ಮಾದಕ ವಸ್ತು ಸೇವನೆ ಆರೋಪದಲ್ಲಿ ಯುವಕರಿಬ್ಬರನ್ನು ಬಂದರು ಪೊಲೀಸರು ಬಂಧಿಸಿದ್ದಾರೆ.
ಉಳ್ಳಾಲ ಕೋಡಿ ನಿವಾಸಿ ಇಸ್ಮಾಯಿಲ್ ಸುಹೈಲ್ ಸಾಹೀಲ್ (26), ಕಾವೂರು ಶಾಂತಿನಗರ ನಿವಾಸಿ ಮೊಹಮ್ಮದ್ ಶೋಯೆಬ್ (29) ಪ್ರಕರಣದ ಆರೋಪಿಗಳು.
ಆ.7ರಂದು ಮಧ್ಯಾಹ್ನ 3.10ಕ್ಕೆ ಕೋರ್ಟ್ ರಸ್ತೆಯ ತಿರುವುನಲ್ಲಿರುವ ಆಟೋ ಸ್ಟ್ಯಾಂಡ್ ಬಳಿಯಲ್ಲಿ ಯುವಕರಿಬ್ಬರೂ ಮಾದಕ ಸೇವನೆ ಮಾಡಿರುವ ಬಗ್ಗೆ ಮಾಹಿತಿ ಹಿನ್ನಲೆಯಲ್ಲಿ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸ್ ವಿಚಾರಣೆ ವೇಳೆ ಮಾದಕ ಸೇವನೆಯನ್ನು ಒಪ್ಪಿಕೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ ಮಾದಕ ಸೇವನೆ ಮಾಡಿರುವುದು ದೃಢಪಟ್ಟಿದೆ.
ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.