ಮಾದಕ ವಸ್ತು ಸೇವನೆ ಐವರು ಆರೋಪಿಗಳ ಬಂಧನ

drugs
Published on

ಮಂಗಳೂರು: ನಗರದ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಸೇವನೆ ಮಾಡಿದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮೋರ್ಗನ್ಸ್‌ಗೇಟ್ ಭಾರತ್ ಮೈದಾನದ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ್ದ ಕೇರಳದ ವಿವೇಕ್ (24), ದೇರೆಬೈಲ್ ಕೊಂಚಾಡಿಯಲ್ಲಿದ್ದ ಸ್ಥಳೀಯ ಗಡುಕಲ್ಲು ನಿವಾಸಿ ಮುಕೇಶ್ ಕುಮಾರ್ (27), ಕಂಕನಾಡಿ ಬಾಲಿಕಾಶ್ರಮ ರಸ್ತೆಯ ಬಳಿ ಇದ್ದ ಕೇರಳದ ಕಾಶಿನಾಥ್ (22), ಕಲ್ಬಾವಿ ರಸ್ತೆಯಲ್ಲಿದ್ದ ಮೈಸೂರಿನ ಅಭಿಷೇಕ್ ಫ್ರಾನ್ಸಿಸ್ (24), ಕೋಡಿಕಲ್ ಶಾಲಾ ಬಳಿಯಿಂದ ಅಶೋಕನಗರ ನಿವಾಸಿ ಡ್ಯಾನಿಶ್ ಆರೋನ್ ಡಿಕ್ರೂಸ್ (22) ಬಂಧಿತರು. ಎಲ್ಲಾ ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ. ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net