ಕುದ್ರೋಳಿ ದಸರಾ ಮರವಣಿಗೆ : ವಾಹನ ಸಂಚಾರ ಮಾರ್ಗ ಬದಲಾವಣೆ

8593856.12355259-998365.530736381
Published on



ಮಂಗಳೂರು : ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ವತಿಯಿಂದ ನಡೆಯಲಿರುವ ಮಂಗಳೂರು ದಸರಾ ಮೆರವಣಿಗೆ
ಹಿನ್ನೆಲೆಯಲ್ಲಿ ಅ.13ರಂದು ಮಧ್ಯಾಹ್ನ 2ರಿಂದ ಅ.14ರಂದು ಬೆಳಗ್ಗೆ 6ರವರೆಗೆ ವಾಹನಗಳ ಸುಗಮ ಸಂಚಾರಕ್ಕಾಗಿ
ಪಾರ್ಕಿಂಗ್ ಹಾಗೂ ಸಂಚಾರದಲ್ಲಿ ತಾತ್ಕಾಲಿಕ ಮಾರ್ಪಾಡು ಮಾಡಿ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಆದೇಶ ಹೊರಡಿಸಿದ್ದಾರೆ.
* ಮೆರವಣಿಗೆ ಸಾಗುವ ಕುದ್ರೋಳಿ ದೇವಸ್ಥಾನ - ಮಣ್ಣಗುಡ್ಡೆ- ನಾರಾಯಣ ಗುರು ವೃತ್ತ -ಲಾಲ್‌ಭಾಗ್ - ಪಿವಿಎಸ್ ಗೋವಿಂದ ಪೈ ವೃತ್ತ - ಕೆಎಸ್‌ಆರ್ ರಸ್ತೆ - ಹಂಪನಕಟ್ಟ ಜಂಕ್ಷನ್ - ಕೆ. ಬಿ. ವೃತ್ತ - ಗಣಪತಿ ಹೈಸ್ಕೂಲ್ ರಸ್ತೆ - ಮೋಹಿನಿ ವಿಲಾಸ ಜಂಕ್ಷನ್- ಓಂ ಮಹಲ್ ಜಂಕ್ಷನ್ - ರಥಬೀದಿ - ಲೋವರ್ ಕಾರ್‌ಸ್ಟ್ರೀಟ್ - ನ್ಯೂಚಿತ್ರಾ-ಅಳಕೆ - ಕುದ್ರೋಳಿ ದೇವಸ್ಥಾನದ ವರೆಗೆ ವಾಹನ ಸಂಚಾರ ಹಾಗೂ ರಸ್ತೆಯ ಎರಡು ಕಡೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.
*ಕೊಟ್ಟಾರ ಚೌಕಿ ಮುಖಾಂತರ ನಗರಕ್ಕೆ ಬರುವ ಎಲ್ಲ ವಾಹನಗಳ ನಗರ ಪ್ರವೇಶ ನಿಷೇಧಿಸಲಾಗಿದೆ.
* ಉರ್ವ ಸ್ಟೋರ್ ಕಡೆಯಿಂದ ಹಾಗೂ ಉರ್ವ ಮಾರ್ಕೆಟ್ ನಾರಾಯಣ ಗುರು ವೃತ್ತದ ಕಡೆಗೆ , ಕೆಎಸ್‌ಆರ್‌ಟಿಸಿ ಜಂಕ್ಷನ್ ಕಡೆಯಿಂದ ಎಂ. ಜಿ. ರಸ್ತೆ (ಲಾಲ್‌ಬಾಗ್ ಜಂಕ್ಷನ್ ಮೂಲಕ)ಕಡೆಗೆ , ಪಿಂಟೋ ಬೇಕರಿ ಜಂಕ್ಷನ್‌ನಿಂದ ಕೊಡಿಯಾಲ್‌ಗುತ್ತು ಜಂಕ್ಷನ್ ಮುಖಾಂತರ ಎಂ. ಜಿ. ರಸ್ತೆ ಕಡೆಗೆ ಬರುವ/ಹೋಗುವ ಎಲ್ಲ ವಾಹನಗಳನ್ನು ನಿಷೇಧಿಸಲಾಗಿದೆ.
* ಪಶು ಆಸ್ಪತ್ರೆ ಜಂಕ್ಷನ್‌ನಿಂದ ಕೋರಿರೊಟ್ಟಿ ಜಂಕ್ಷನ್- ಎಂ. ಜಿ. ರಸ್ತೆ ಕಡೆಗೆ, ಕರಂಗಲಪಾಡಿ ಜಂಕ್ಷನ್‌ನಿಂದ ಪಿ.ವಿ.ಎಸ್ ಜಂಕ್ಷನ್‌ಗೆ , ಕೋರ್ಟ್ ರೋಡ್‌ನಿಂದ ಕೆ.ಎಸ್.ರಾವ್ ರಸ್ತೆಗೆ , ಬಾವುಟಗುಡ್ಡೆ ಕಡೆಯಿಂದ ಸಿಟಿ ಸೆಂಟರ್ ಮೂಲಕ ಕೆ.ಎಸ್.ರಾವ್
ರಸ್ತೆಗೆ ಬರುವ ಹಾಗೂ ಹಂಪನಕಟ್ಟೆ ಜಂಕ್ಷನ್‌ನಿಂದ ಕೆ.ಎಸ್.ರಾವ್ ರಸ್ತೆಗೆ ಹೋಗುವ ಎಲ್ಲ ವಾಹನಗಳನ್ನು ನಿಷೇಧಿಸಲಾಗಿದೆ.
*ಕುದ್ರೋಳಿ ನಾರಾಯಣಗುರು ಕಾಲೇಜು ಬಳಿಯಿಂದ ನವದುರ್ಗೆಯರ ಟ್ಯಾಬ್‌ಗಳು ತಯಾರಿಗೊಂಡು ದೇವಸ್ಥಾನಕ್ಕೆ ಬರಲಿರುವುದರಿಂದ ಕುದ್ರೋಳಿ ನಾರಾಯಣಗುರು ಕಾಲೇಜು ಜಂಕ್ಷನ್ ರಸ್ತೆಯಿಂದ ಬರ್ಕೆ ಜಂಕ್ಷನ್ ತನಕ ಮತ್ತು ಬರ್ಕೆ ಜಂಕ್ಷನ್‌ನಿಂದ ದುರ್ಗಾಮಹಲ್ ಜಂಕ್ಷನ್‌ವರೆಗೆ ಹಾಗೂ ದುರ್ಗಾಮಹಲ್ ಜಂಕ್ಷನ್‌ನಿಂದ ಅಳಕೆ ಬ್ರಿಡ್ಜ್ ತನಕ ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.
* ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ಟ್ಯಾಬ್ಲೊಗಳು ಉರ್ವ ಮಾರ್ಕೆಟ್ ಜಂಕ್ಷನ್‌ನಿಂದ ಗಾಂಧಿನಗರ ಮುಖಾಂತರ ಮಣ್ಣಗುಡ್ಡ ಗುರ್ಜಿ ಜಂಕ್ಷನ್‌ನಲ್ಲಿ ಸರದಿ ಸಾಲಿನಲ್ಲಿ ಬಂದು ನಿಂತು ಇಲ್ಲಿಂದ ಟ್ಯಾಬ್‌ಗಳು ಮೆರವಣಿಗೆಯಲ್ಲಿ ಮುಂದುವರೆಯಲಿರುವುದರಿಂದ ಮಣ್ಣಗುಡ್ಡ ಗುರ್ಜಿ ಜಂಕ್ಷನ್‌ನಿಂದ ಉರ್ವ ಮಾರ್ಕೆಟ್ ಜಂಕ್ಷನ್‌ವರೆಗಿನ ರಸ್ತೆಯ ಇಕ್ಕೆಲಗಳಲ್ಲಿ ಹಾಗೂ ಮಣ್ಣಗುಡ್ಡ ಗಾಂಧಿನಗರ ಪಾರ್ಕ್ ಮುಂಭಾಗದ ರಸ್ತೆ ಮತ್ತು ಗಾಂಧಿನಗರ ಒಂದರಿಂದ ಎಂಟರವರೆಗಿನ ಅಡ್ಡ ರಸ್ತೆಗಳ ಇಕ್ಕೆಲಗಳಲ್ಲಿ ಎಲ್ಲ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.
* ಉಡುಪಿ ಕಡೆಯಿಂದ ಕೊಟ್ಟಾರ ಚೌಕಿ ಮುಖಾಂತರ ನಗರಕ್ಕೆ ಬರುವ ಎಲ್ಲ ವಾಹನಗಳು ಕುಂಟಿಕಾನ- ಕೆ.ಪಿ.ಟಿ-ನಂತೂರು ಮೂಲಕ ನಗರ ಪ್ರವೇಶಿಸಬೇಕು.
*ಉರ್ವಾ ಸ್ಟೋರ್ ಕಡೆಯಿಂದ ನಾರಾಯಣ ಗುರು ವೃತ್ತದ ಮೂಲಕ ನಗರ ಪ್ರವೇಶಿಸುವ ಎಲ್ಲ ವಾಹನಗಳು ಕೋಟೆಕಣಿ
ರಸ್ತೆಯಾಗಿ-ಕೊಟ್ಟಾರ ಕ್ರಾಸ್- ಕಾಪಿಕಾಡು-ಕೆ.ಎಸ್.ಆರ್.ಟಿ.ಸಿ-ಬಿಜೈ ಮಾರ್ಕೆಟ್ ಜಂಕ್ಷನ್ ಮೂಲಕ ಸಂಚರಿಸಬೇಕು.
* ನಗರದಿಂದ ನ್ಯೂ ಚಿತ್ರಾ ಜಂಕ್ಷನ್ ಮೂಲಕ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಮೂಲಕ ನಾರಾಯಣ ಗುರು ವೃತ್ತದ ಕಡೆಗೆ ಸಂಚರಿಸುವವಾಹನಗಳು ನ್ಯೂಚಿತ್ರಾ ಜಂಕ್ಷನ್‌ನಿಂದ ಕಂಡತ್‌ಪಳ್ಳಿ - ಮಂಡಿ - ಕುದ್ರೋಳಿ - ಬೊಕ್ಕಪಟ್ಲ -
ಸುಲ್ತಾನ್‌ಬತ್ತೇರಿ ಮೂಲಕ ಸಂಚರಿಸಬೇಕು.
ನಗರದಿಂದ ಕೆ.ಎಸ್ ರಾವ್ ರಸ್ತೆ ಮೂಲಕ ಸಂಚರಿಸುವವಾಹನಗಳು ಹಂಪನಕಟ್ಟ ಜಂಕ್ಷನ್ - ಡಾ. ಅಂಬೇಡ್ಕರ್ ಸರ್ಕಲ್ ಮೂಲಕ ಸಂಚರಿಸಬೇಕು.
* ಕೆ.ಎಸ್.ಆರ್.ಟಿ.ಸಿ. ಬಸ್ಸು ನಿಲ್ದಾಣದಿಂದ ಉಡುಪಿ ಹಾಗೂ ಪಂಪುವೆಲ್ ಕಡೆಗೆ ಹೋಗುವ/ಬರುವ ಎಲ್ಲಾ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಕುಂಟಿಕಾನ / ಕೆ.ಪಿ.ಟಿ ಜಂಕ್ಷನ್‌ಮೂಲಕ ಸಂಚರಿಸುವಂತೆ ಪೊಲೀಸ್ ಆಯುಕ್ತರ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net