ಮಾದಕವಸ್ತು ಸೇವಿಸಿದ ನಾಲ್ವರು ಯುವಕರ ಬಂಧನ

drugs
Published on

ಮಂಗಳೂರು: ದೇರಳಕಟ್ಟೆ ಆಸ್ಪತ್ರೆಯೊಂದರ ಬಳಿ ಮಾದಕವಸ್ತು ಸೇವನೆ ಮಾಡಿದ ಮೂವರನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.


ಪಿಲಾರ್ ಮುಂಡೋಳಿ ನಿವಾಸಿ ಇಹ್ಸಾನ್ ಅಹ್ಮದ್ (28), ಪ್ರಕಾಶ್‌ನಗರದ ನೌಶಾದ್ ಆಲಿ (27), ಚೆಂಬುಗುಡ್ಡೆಯ ಮೊಹಮ್ಮದ್ ಫತಾಕ್ (30) ಬಂಧಿತರು. ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ. ಅವರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಇನ್ನೊಂದು ಪ್ರಕರಣದಲ್ಲಿ ನಗರದ ಸಿಟಿ ಸೆಂಟರ್ ಮಾಲ್ ಬಳಿ ಮಾದಕ ವಸ್ತು ಸೇವಿಸಿ ತೂರಾಡುತ್ತಿದ್ದ ಸೂಟರ್‌ಪೇಟೆ 6 ಅಡ್ಡರಸ್ತೆ ನಿವಾಸಿ ಕೌಶಿಕ್ (22) ಎಂಬಾತನನ್ನು ಆ್ಯಂಟಿ ಡ್ರಗ್ ಟೀಮ್ ಮಂಗಳವಾರ ಬಂಧಿಸಿದೆ.


ಆತನನ್ನು ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ಆತ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ. ಆತನ ವಿರುದ್ಧ ಉತ್ತರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net