

ಮಂಗಳೂರು: ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಮಂಗಳೂರು ಇದರ ವತಿಯಿಂದ ನೀಡಲ್ಪಡುವ, ಎರಡನೆಯ ವರ್ಷದ ಚೂಂತಾರು ಲಕ್ಷ್ಮೀನಾರಾಯಣ ಭಟ್ಟ ವೈದಿಕ ಪುರಸ್ಕಾರ ಪ್ರದಾನ ಚೂಂತಾರಿನ ಉಪಾಸನಾ ಮನೆಯಲ್ಲಿ ಜರಗಿತು.
ಪುರೋಹಿತರೂ ಪೌರೋಹಿತ್ಯ ಸಹಾಯಕರೂ ಆಗಿರುವ ಕಾಪುತಡ್ಕ ಶಂಕರನಾರಾಯಣ ಶಾಸ್ತ್ರಿ ಮತ್ತು ಸವಿತಾ ಶಾಸ್ತ್ರಿ, ಪುರೋಹಿತರಾದ ಮಾಡಾವಿನ ಎಲ್ಯಡ್ಕ ಗೋಪಾಲಕೃಷ್ಣ ಭಟ್ ಮತ್ತು ಸಹನಾ ಇವರನ್ನು ಚೂಂತಾರು ಮನೆತನದ ಕುಲಪುರೋಹಿತ ವಡ್ಯ ಶ್ರೀಕೃಷ್ಣ ಭಟ್ ಮತ್ತು ಹಿರಿಯರಾದ ಆನೆಕಾರ ಗಣಪಯ್ಯನವರು ಫಲ ತಾಂಬೂಲ, ಕಾಣಿಕೆಯೊಂದಿಗೆ ಸನ್ಮಾನಿಸಿದರು. ಸನ್ಮಾನಿತರ ಪರವಾಗಿ ಶಂಕರನಾರಾಯಣ ಶಾಸ್ತ್ರಿಯವರು ಅನಿಸಿಕೆಗಳನ್ನು ತಿಳಿಸಿದರು.
ಸನ್ಮಾನ ಸಮಿತಿಯ ಸಂಚಾಲಕ ರಾಮಕೃಷ್ಣ ಭಟ್ ಚೂಂತಾರುರವರು ಸನ್ಮಾನ ಪತ್ರ ವಾಚಿಸಿ, ಸನ್ಮಾನಿತರನ್ನು ಅಭಿನಂದಿಸಿ ಮಾತನಾಡಿದರು.
ಟ್ರಸ್ಟಿನ ಚೂಂತಾರು ಮಹೇಶ ಭಟ್, ಗಂಗಾ ಮಹೇಶ್, ಗೀತಾ ಗಣೇಶ್ ಕುರಿಯ, ಡಾ.ರಾಜಶ್ರೀಮೋಹನ್, ಚೊಕ್ಕಾಡಿ ಶ್ರೀರಾಮ ದೇವಾಲಯದ ಕಾರ್ಯದರ್ಶಿ ಕೃಷ್ಣಮೂರ್ತಿ ನೇಣಾರು ಉಪಸ್ಥಿತರಿದ್ದರು.
ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಟ್ರಸ್ಟಿ ಡಾ. ಮುರಲೀಮೋಹನ ಚೂಂತಾರುರವರು ಸ್ವಾಗತಿಸಿ, ವಂದಿಸಿದರು.