ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲರ್ಸ್ ಗೋಲ್ಡ್ ಫಿಂಚ್ ಹೊಟೇಲ್‌ನಲ್ಲಿ ವಿಶೇಷ ಆಭರಣ ಪ್ರದರ್ಶನ- ಮಾರಾಟ ಆರಂಭ

mng-jan24-gold1
Published on

ಮಂಗಳೂರು : ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲರ್ಸ್ ಮಂಗಳೂರಿನ ಗ್ರಾಹಕರಿಗಾಗಿ ಗೋಲ್ಡ್ ಫಿಂಚ್ ಹೊಟೇಲ್‌ನ 2ನೇ ಮಹಡಿ ಸಿಲ್ವರ್ ಬಿಲ್ಸ್‌ನಲ್ಲಿ ಹಮ್ಮಿಕೊಂಡ ನಾಲ್ಕು ದಿನಗಳ ವಿಶೇಷ ಆಭರಣಗಳ ಪ್ರದರ್ಶನ ಮತ್ತು ಮಾರಾಟವನ್ನು ಶುಕ್ರವಾರ ಶಾಸಕ ವೇದವ್ಯಾಸ ಕಾಮತ್ ಉದ್ಘಾಟಿಸಿದರು.

ಸಿ.ಕೃಷ್ಣಯ್ಯ ಚೆಟ್ಟಿ ಜ್ಯುವೆಲ್ಲರ್ಸ್ ಸಂಸ್ಥೆಗೆ 155 ವರ್ಷಗಳ ಇತಿಹಾಸವಿದ್ದು, ಅದ್ಭುತ ಕೊಡುಗೆಗಳೊಂದಿಗೆ ಮಂಗಳೂರಿನಲ್ಲಿ ವಿಶೇಷ ಆಭರಣ ಪ್ರದರ್ಶನ ಮತ್ತು ಮಾರಾಟ ಹಮ್ಮಿಕೊಂಡಿದ್ದು, ಗ್ರಾಹಕರು ಇದರ ಸದುಪಯೋಗ ಪಡೆಯಬೇಕು. ಶುದ್ಧ ಚಿನ್ನ ಮತ್ತು ರತ್ನಗಳು ಹಾಗೂ ಅತ್ಯುತ್ತಮವಾದ ಕರಕುಶಲತೆಯೊಂದಿಗೆ ಸಾಂಪ್ರದಾಯಿಕ ಮತ್ತು ಸಮಕಾಲೀನ ಸೃಷ್ಟಿಗಳ ಸಂಗ್ರಹವನ್ನು ವಿಶಿಷ್ಟ ಶ್ರೇಣಿಯೊಂದಿಗೆ ಪ್ರದರ್ಶಿಸುತ್ತಿದೆ ಎಂದರು.

ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಸ್ಟೋರ್ ಮ್ಯಾನೇಜರ್ ಸುಮನ್, ಸಿ.ಕೃಷ್ಣಯ್ಯಚೆಟ್ಟಿ ಜ್ಯುವೆಲರ್ಸ್‌ನಲ್ಲಿ ವೈಡೂರ್ಯ, ಸಿಟ್ರಿನ್, ಮುತ್ತುಗಳು, ನೀಲ, ಮಾಣಿಕ್ಯಗಳಂತಹ ಅಪರೂಪದ ವಜ್ರಗಳ ಸೂಕ್ಷ್ಮ ವಿನ್ಯಾಸಗಳು ಗ್ರಾಹಕರ ಮನ ಸೆಳೆಯುತ್ತಿವೆ. ್ಚ್ಟ.್ಚ್ಝ್ಠಚಿ ನ ನಮ್ಮ ಲ್ಯಾಬ್ ಗ್ರೋನ್ ಡೈಮಂಡ್ಸ್ ವಿಭಾಗದಲ್ಲಿ ಸೊಗಸಾದ ಸ್ವರೂಪ ಹೊಂದಿದ್ದು, ವಿಶೇಷ ಕರಕುಶಲತೆಯ ಸಮ್ಮಿಳನವಿದೆ. ಸಿಕೆಸಿಯ ್ಚ್ಟ.್ಚ್ಝ್ಠಚಿ , ಬೆಳ್ಳಿ ಆಭರಣ ಬ್ರಾಂಡ್ ಕೃಷ್ಣ ಉದಯ ಆಗಿದ್ದು, 6 ನೇ ತಲೆಮಾರಿನ ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲರ್ಸ್ ಕಾರ್ಯಕಾರಿ ನಿರ್ದೇಶಕ ಚೈತನ್ಯವಿ ಕೋಥಾ ಇವರ ನೇತೃತ್ವದಲ್ಲಿ ವಿನೂತನ ಕಲ್ಪನೆಯೊಂದಿಗೆ ಸೊಗಸಾದ ಬೆಳ್ಳಿ ಆಭರಣಗಳನ್ನು 599 ರೂ. ನಿಂದ ಪ್ರಾರಂಭವಾಗುವ ಬೆಲೆಗಳೊಂದಿಗೆ ಗ್ರಾಹಕರಿಗೆ ಒದಗಿಸುತ್ತಿದೆ.

ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ ಮತ್ತು ಬೇಲೂರಿನ ಚೆನ್ನಕೇಶವ ದೇವಾಲಯದ ವಾಸ್ತು ಶಿಲ್ಪದಿಂದಾಗಿ 2023 ರಲ್ಲಿ ಯುನೆಸ್ಕೋ ವಿಶ್ವಪರಂಪರೆಯ ಸ್ಥಾನಮಾನವನ್ನು ನೀಡಲಾಯಿತು. 100 ರಿಂದ 700 ಗಂಟೆಗಳ ಕಾಲ ಕೆಲಸ ಮಾಡಿ ಸಿದ್ಧಪಡಿಸಿದ ಈ ಸಂಗ್ರಹವು ಹೊಯ್ಸಳ ರಾಜವಂಶದ ಚೈತನ್ಯವನ್ನು ಪ್ರತಿಧ್ವನಿಸುತ್ತದೆ, ದೇವಾಲಯದ ವಾಸ್ತುಶಿಲ್ಪದಲ್ಲಿ ಕಂಡುಬರುವ ಕೆತ್ತನೆ ಮತ್ತು ಅಲಂಕಾರಗಳನ್ನು ಒಳಗೊಂಡಿದೆ ಎಂದವರು ಹೇಳಿದರು.

ಸಂಸ್ಥೆಯ ಸ್ಟೋರ್ ಮ್ಯಾನೇಜರ್ ಸುಮನ್, ಮಾರುಕಟ್ಟೆ ಮುಖ್ಯಸ್ಥ ತೇಜಸ್ವಿ ಕಾಲರಾ ಉಪಸ್ಥಿತಿರಿದ್ದರು.

ಮಂಗಳೂರು ಗ್ರಾಹಕರಿಗೆ ವಿಶೇಷ ಕೊಡುಗೆ

ಮಂಗಳೂರು ಗ್ರಾಹಕರಿಗಾಗಿ ಸಿ.ಕೃಷ್ಣಯ್ಯ ಚೆಟ್ಟಿ ಜ್ಯುವೆಲ್ಲರ್ಸ್ 2,4,6,9 ವಿಶೇಷ ಕೊಡುಗೆ ಘೋಷಿಸಿದೆ. ಬೆಳ್ಳಿಯ ಮೇಲೆ ಶೇ.2 ರಿಯಾಯಿತಿ, ಚಿನ್ನದ ಮೇಲೆ ಶೇ.4, ವಜ್ರದ ಮೇಲೆ ಶೇ.9, ಮತ್ತು 18.69 ಲಕ್ಷ ಮೌಲ್ಯದ ವಜ್ರದ ಮೇಲೆ ಶೇ.9 ರಿಯಾಯಿತಿ ಪಡೆಯಬಹುದಾಗಿದೆ. ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. ಈ ಕೊಡುಗೆ ಜ.24ರಂದು ಪ್ರಾರಂಭವಾಗಿ 27 ರಂದು ಕೊನೆಗೊಳ್ಳುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net