ಮಂಗಳೂರು: ಸ್ವಾಮಿ ವಿವೇಕಾನಂದರು ಮಾನವ ಕುಲಕ್ಕೆ ಸೌಹಾರ್ಧತೆಯ ಸಂದೇಶ ನೀಡಿದವರು. ಅವರ ಮಾನವ ಧರ್ಮದ ಸಂದೇಶವನ್ನು ನಾವು ನಮ್ಮ ಜೀವನದಲ್ಲಿ ಪಾಲಿಸ ಬೇಕಿದೆ ಎಂದು ಶ್ರೀ ರಾಮಕ್ರಷ್ಣ ಮಠದ ಅಧ್ಯಕ್ಷ ಜಿತಕಾಮಾನಂದ ಸ್ವಾಮೀಜಿ ನುಡಿದರು.
ವಿವೇಕ ಚಿಂತನಾ ಸಮಿತಿ ಬಿಜೈ ವತಿಯಿಂದ ವಿವೇಕಾನಂದರ ಉದ್ಯಾನವನ ಬಿಜೈನಲ್ಲಿ ನಡೆದ ವಿವೇಕಾನಂದರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು.
ಅಂಗನವಾಡಿ ಕಾರ್ಯಕರ್ತೆ ಜಯಲಕ್ಷೀ ಟೀಚರ್, ಅಂತರಾಷ್ಟ್ರೀಯ ಮಟ್ಟದ ಹಿರಿಯ ಅತ್ಲೆಟಿಕ್ ಸಾಧಕ ಆನಂದ ಸೋನ್ಸ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಹಿರಿಯ ಹುಲಿವೇಷ ಕಲಾವಿದ ಗಂಗಾಧರ್ ದೇವಾಡಿಗ, ಯುನೈಟೆಡ್ ಫ್ರೆಂಡ್ಸ್ ಬಿಜೈ ಇವರನ್ನು ಗೌರವಿಸಲಾಯಿತು.
ಬಿಜೈ ಚರ್ಚ್ ನ ಧರ್ಮ ಗುರುಗಳಾದ ವಂದನೀಯ ಜೆ.ಬಿ.ಸಲ್ಡಾನ, ಮಾಜಿ ಶಾಸಕ ಜೆ.ಆರ್.ಲೋಬೋ, ವಿವೇಕ ಚಿಂತನಾ ಸಮಿತಿಯ ಗೌರವಾಧ್ಯಕ್ಷ ಪ್ರಕಾಶ್ ಬಿ. ಸಾಲ್ಯಾನ್, ಅಧ್ಯಕ್ಷ ಕಿರಣ್ ಕುಮಾರ್ ಕೊಡಿಯಾಲ್ ಬೈಲ್, ಭಂಡಾರಿ ಬಿಲ್ಡರ್ ಮಾಲೀಕ ಲಕ್ಷೀಶ ಭಂಡಾರಿ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ವಿಶ್ವಾಸ್ ಕುಮಾರ್ ದಾಸ್, ಅನುಪಮಾ ಗ್ಯಾಸ್ ಮಾಲೀಕ ಸುರೇಶ್,ಲ್ಯಾನ್ಸಿ ಲಾಟ್ ಪಿಂಟೋ, ಸುನಿಲ್ ಕುಮಾರ್ ಬಜಿಲಕೇರಿ,ದಿಲ್ ರಾಜ್ ಆಳ್ವ, ತನ್ವೀರ್ ಶಾ, ಚೇತನ್ ಕುಮಾರ್,ರಾಕೇಶ್ ದೇವಾಡಿಗ,ಲಿಯಾಖತ್ ಶಾ, ದೇವಿ ಪ್ರಸಾದ್ ಕದ್ರಿ, ದಿನೇಶ್ ಬಲಿಪತೋಟ, ಟಿ.ಕೆ.ಸುಧೀರ್ ಮೊದಲಾದವರು ಉಪಸ್ಥಿತರಿದ್ದರು. ರಘುರಾಜ್ ಕದ್ರಿ ಕಾರ್ಯಕ್ರಮ ನಿರ್ವಹಿಸಿದರು.