

ಮಂಗಳೂರು: ಅದಾನಿ ಫೌಂಡೇಶನ್‌ನ ಸುಪೋಶನ್ ಯೋಜನೆ ವತಿಯಿಂದ ಮುಟ್ಟಿನ ನೈರ್ಮಲ್ಯ ದಿನದ ಅಂಗವಾಗಿ ಮಹಿಳೆಯರು ಋತುಸ್ರಾವದ ಸಂದರ್ಭದಲ್ಲಿ ವಹಿಸ ಬೇಕಾದ ಕ್ರಮಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ಬೈಕಂಪಾಡಿ ಮೀನಕಳಿಯ ಪರಿಸರದಲ್ಲಿ ಮಂಗಳವಾರ ಜರುಗಿತು.
ಸುಪೋಶನ್ ಅಧಿಕಾರಿ ಡಾ.ಪ್ರೇಮಾ ಡಿಸೋಜ ಅವರು, ಋತುಚಕ್ರದ ಆರೋಗ್ಯ ಮತ್ತು ನೈರ್ಮಲ್ಯ, ಸಕಾಲದಲ್ಲಿ ಸ್ಯಾನಿಟರಿ ಪ್ಯಾಡ್‌ಗಳ ಬದಲಾವಣೆ, ಸ್ಯಾನಿಟರಿ ಪ್ಯಾಡ್‌ಗಳ ಸರಿಯಾದ ಬಳಕೆ ಮತ್ತು ವಿಲೇವಾರಿ ಬಗ್ಗೆ ಜಾಗೃತಿ ಮೂಡಿಸಿದರು. ಅಂಗನವಾಡಿ ಶಿಕ್ಷಕಿ ವೀಣಾ, ಸಂಗಿನಿಯರಾದ ಬಬಿತಾ, ಸುನೀತಾ, ಸುಚಿತ್ರಾ ಹಾಗೂ ಸುಷ್ಮಾ, ಗಂಗಮ್ಮ, ಮಲ್ಲಿಕಾ ಭಾಗವಹಿಸಿ, ವಿವಿಧ ಕಡೆ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.