

ಮಂಗಳೂರು: ನಗರದ ಸೆಂಟ್ರಲ್ ರೈಲ್ವೆ ಸ್ಟೇಷನ್ ಆಟೋ ರಿಕ್ಷಾ ಪಾರ್ಕ್‌ನಲ್ಲಿ ಕ್ಯೂ ನಲ್ಲಿರುವಾಗಲೇ ರಿಕ್ಷಾ ಚಾಲಕರೊಬ್ಬರು ಹೃದಯಘಾತದಿಂದ ಮಂಗಳವಾರ ಮೃತಪಟಿದ್ದಾರೆ.
ಮೂಲತಃ ಬಜಾಲ್ ವಿದ್ಯಾ ನಗರದ ನಿವಾಸಿ ಇಕ್ಬಾಲ್ (47) ಮೃತ ಚಾಲಕ. ಪ್ರಸ್ತುತ ಅಡ್ಯಾರ್ ಕಣ್ಣೂರಿನ ಬೋರುಗುಡ್ಡೆಯ ಬಾಡಿಗೆ ಮನೆಯಲ್ಲಿ ಇವರು ವಾಸವಾಗಿದ್ದರು. ರಿಕ್ಷಾ ಪಾರ್ಕ್‌ನಲ್ಲಿ ಕ್ಯೂ ನಲ್ಲಿರುವಾಗಲೇ ಇಕ್ಬಾಲ್ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು ತಕ್ಷಣವೇ ಇತರ ರಿಕ್ಷಾ ಚಾಲಕರು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.