ಅಶೋಕನಗರ ಶಾಲಾ ವಿದ್ಯಾರ್ಥಿಗಳಿಂದ ವನಮಹೋತ್ಸವ

mng--13 Aug Ashoknagara vana
Published on


ಮಂಗಳೂರು: ಶಾಲಾ ಮಕ್ಕಳ ವಾಹನ ಚಾಲಕರ ಸಮಿತಿ ಲೇಡಿಹಿಲ್ ಹಾಗೂ ಅಶೋಕನಗರ ಕನ್ನಡ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ಜೊತೆ ಸೇರಿ ವನಮಹೋತ್ಸವ ನಡೆಯಿತು.
ಎಲ್ಲಾ ಮಕ್ಕಳಿಗೆ ಗಿಡಗಳನ್ನು ವಿತರಿಸಿ. ಪರಿಸರದ ಬಗ್ಗೆ ಸಂವಾದ ನಡೆಸಿ ಉರ್ವ ಹೊಗೆಬೈಲ್ ಪರಿಸರದಲ್ಲಿ ಗಿಡಗಳನ್ನು ನೆಡಲಾಯಿತು.


ವಲಯ ಅರಣ್ಯ ಅಧಿಕಾರಿ ರಾಜೇಶ್ ಬಳಿಗಾರ್ ಉದ್ಘಾಟಿಸಿದರು. ವನಮಹೋತ್ಸವ ಒಂದು ಕಾರ್ಯಕ್ರಮವಾಗಿ ಉಳಿಯಬಾರದು. ಗಿಡಗಳನ್ನು ನೆಟ್ಟು ಅದನ್ನು ಪೋಷಣೆ ಮಾಡಿ ನೀರು ಹಾಕಿ ಬೆಳೆಸುವುದು ನಮ್ಮ ಕರ್ತವ್ಯ ಎಂದರು.


ಅಶೋಕನಗರ ಮುಖ್ಯ ಶಿಕ್ಷಕಿ ಜೋಯ್ಸ ಹೆಂಡ್ರಿಟಾ ಮಾತನಾಡಿ, ನಮ್ಮ ಕನ್ನಡ ಮಾಧ್ಯಮ ಶಾಲೆಯಲ್ಲಿ ಮಕ್ಕಳಿಗೆ ವನಸಂರಕ್ಷಣೆಯ ಬಗ್ಗೆ ತಿಳುವಳಿಕೆ ಮೂಡಿಸಲಾಗುತ್ತಿದೆ ಎಂದರು.


ದ.ಕ. ಜಿಲ್ಲಾ ಶಾಲಾ ಮಕ್ಕಳ ವಾಹನ ಚಾಲಕರ ಅಧ್ಯಕ್ಷರು ಮೋಹನ್ ಅತ್ತಾವರ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಮನಪಾ ಸದಸ್ಯ ಗಣೇಶ್ ಕುಲಾಲ್, ಪರಿಸರ ಪ್ರೇಮಿ ಸರ್ವೆಶ್ ರಾವ್, ಎನ್‌ಇಸಿಎಫ್ ಸದಸ್ಯರಾದ ಶೈಲೇಶ್ ಕುಮಾರ್, ವಿದ್ಯಾವರ್ಧಕ ಸಂಘದ ಶ್ರೀನಿವಾಸ್ ಬೈಕಾಡಿ ಉಪಸ್ಥಿತರಿದ್ದರು.


ಶಂಕರ್ ಶೆಟ್ಟಿ ಸ್ವಾಗತಿಸಿದರು. ಪ್ರ. ಕಾರ್ಯದರ್ಶಿ ಗಣೇಶ್ ಉರ್ವಸ್ಟೋರ್ ವಂದಿಸಿದರು. ಸತೀಶ್ ಪೂಜಾರಿ ಅಶೋಕನಗರ ಕಾರ್ಯಕ್ರಮ ನಿರೂಪಿಸಿದರು.


ನವೀನ್ ಆಕಾಶ್‌ಭವನ, ಸ್ಟಾನಿ ಮೇನೆಜಸ್, ಕಿರಣ್ ಲೇಡಿಹಿಲ್, ಸುಧಾಕರ ವಾಸುಕಿ, ಮನಿಷ್, ಜಯಂತ್, ನರೇಶ್, ಚಂದ್ರ ಕಲ್ಪನೆ, ಪ್ರವೀಣ್ ಕುಂದರ್, ಪ್ರಕಾಶ್ ಕೂಳೂರು, ಸುಮಿತ್, ಹರೀಶ್, ವಿಜಯ್, ಜೀವನ್ ಶೆಟ್ಟಿ, ದೇವಿ ಪ್ರಸಾದ್ ಕೋಡಿಕಲ್, ರಾಜ್ ತಿಲಕ್ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net