

ಓಂ ಜನಹಿತಾಯ ಆಂಗ್ಲ ಮಾಧ್ಯಮ ಶಾಲೆ, ಅರಳ ಇಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಓಂ ಜನಹಿತಾಯ ಸಂಸ್ಥಾನ ಟ್ರಸ್ಟಿನ ಟ್ರಸ್ಟಿ ವಿಶ್ವನಾಥ್ ಶೆಟ್ಟಿ ಮುಖ್ಯ ಅತಿಥಿಯಾಗಿ ಧ್ವಜಾರೋಹಣ ಗೈದರು. ಅಧ್ಯಕ್ಷತೆ ವಹಿಸಿದ್ದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಪದ್ಮನಾಭ ಮಡಿವಾಳ ಹಿರಿಯರ ತ್ಯಾಗ ಬಲಿದಾನಗಳಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ ಸುಭದ್ರ ದೇಶ ಕಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು ಎಂದು ಕರೆ ಕೊಟ್ಟರು.
ಶಾಲ ಸ್ಥಾಪಕ ಶಾಂತರಾಮ್ ಶೆಟ್ಟಿ ಟ್ರಸ್ಟಿಗಳಾದ ವನಿತಾ ಶೆಟ್ಟಿ ಹಾಗೂ ಅನಿತಾ ಶೆಟ್ಟಿ ಸಂಚಾಲಕ ರಂಜನ್ ಕುಮಾರ್ ಶೆಟ್ಟಿ ಆಡಳಿತ ಅಧಿಕಾರಿ ರಕ್ಷಾ ಶೆಟ್ಟಿ ಮುಖ್ಯೋಪಾಧ್ಯಾಯ ಮಹೇಶ್ ಶೆಟ್ಟಿ ಉಪಸ್ಥಿತರಿದ್ದರು ಶಾಲಾ ಸ್ಕೌಟ್ ಗೈಡ್ ದಳ ಹಾಗೂ ವಿದ್ಯಾರ್ಥಿಗಳಿಂದ ಪಥಸಂಚಲ ನಡೆಯಿತು.
ಶಾಲಾ ನಾಯಕಿ ಪ್ರಾನ್ವಿ ಆಳ್ವ ದಿನದ ಮಹತ್ವವನ್ನು ತಿಳಿಸಿದರು ವಿದ್ಯಾರ್ಥಿಗಳಿಂದ ದೇಶಭಕ್ತಿ ಗಾಯನ ನಡೆಯಿತು ಶಾಲಾ ಶಿಕ್ಷಕರು ಮತ್ತು ಶಿಕ್ಷಕರೇ ತರರು ಉಪಸ್ಥಿತರಿದ್ದರು ಸಿಂಧು ಸಾಗತಿಸಿ, ಹೃದ್ದಿ ಶೆಟ್ಟಿ ವಂದಿಸಿದರು ಲಿತಿಕಾ ಶೆಟ್ಟಿ ನಿರೂಪಿಸಿದರು ದೈಹಿಕ ಶಿಕ್ಷಕರಾದ ಪ್ರಕಾಶ್ ಹಾಗೂ ಶಿಕ್ಷಕಿ ಪ್ರಜ್ಞಾ ಸಹಕರಿಸಿದರು