More

    ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಲೆವೆಲ್ 3 ಎಸಿಐ ಗ್ರಾಹಕ ಅನುಭವ ಮಾನ್ಯತೆ



    ಮಂಗಳೂರು : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಏರ್‌ಪೋರ್ಟ್ ಕೌನ್ಸಿಲ್ ಇಂಟರ್‌ನ್ಯಾಷನಲ್ (ಎಸಿಐ) ನಿಂದ
    ಲೆವೆಲ್ 3 ಏರ್‌ಪೋರ್ಟ್ ಕಸ್ಟಮರ್ ಎಕ್ಸ್‌ಪೀರಿಯನ್ಸ್ ಮಾನ್ಯತೆ ಪಡೆದಿದೆ. ಈ ಮಾನ್ಯತೆಯು ಗ್ರಾಹಕರ ಅನುಭವ
    ಸುಧಾರಣೆ ಮುಂದುವರಿಸಲು ವಿಮಾನ ನಿಲ್ದಾಣದ ಸ್ಥಿರ ಬದ್ಧತೆಯನ್ನು ಗುರುತಿಸಿದೆ. ಎಸಿಐ ಹೊರಡಿಸಿದ ಮಾನ್ಯತೆಯು ಒಂದು ವರ್ಷದವರೆಗೆ ಮಾನ್ಯವಾಗಿರುತ್ತದೆ. ಮಂಗಳೂರು ವಿಮಾನ ನಿಲ್ದಾಣವು 2022ರ ಡಿಸೆಂಬರ್‌ನಲ್ಲಿ ಲೆವೆಲ್ 2 ಮಾನ್ಯತೆ ಪಡೆದಿದೆ.
    ಗ್ರಾಹಕರ ಅನುಭವ ಹೆಚ್ಚಳ ಹಾಗೂ ಸಾರ್ವಜನಿಕ ಆಸ್ತಿಯ ನಿರಂತರ ಪ್ರಯತ್ನವನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ಮಾನ್ಯತೆ ಹೊಂದಿದೆ. ಈ ಪ್ರಕ್ರಿಯೆಯಲ್ಲಿ ಭಾಗವಹಿಸುವ ವಿಮಾನ ನಿಲ್ದಾಣಗಳು, ಮಧ್ಯಸ್ಥಗಾರ / ಉದ್ಯೋಗಿಗಳ ತೊಡಗಿಸಿಕೊಳ್ಳುವಿಕೆ ಮತ್ತು ಸಿಬ್ಬಂದಿ ಅಭಿವೃದ್ಧಿಯನ್ನು ಒಳಗೊಂಡಿರುವ ಸಮಗ್ರ ಮೌಲ್ಯಮಾಪನ ಮತ್ತು ತರಬೇತಿಗೆ ಒಳಗಾಗುತ್ತವೆ. ಇದು ವಿಶ್ವಾದ್ಯಂತ ವಿಮಾನ ನಿಲ್ದಾಣ ಉದ್ಯಮದಲ್ಲಿ ಗ್ರಾಹಕರ ಅನುಭವ ನಿರ್ವಹಣೆಯ ಸಮಗ್ರ ನೋಟವನ್ನು ಒದಗಿಸುವ ಏಕೈಕ ಮಾನ್ಯತೆ ಕಾರ್ಯಕ್ರಮವಾಗಿದೆ.
    ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸೇವಾ ವಿನ್ಯಾಸ, ನಾವೀನ್ಯತೆ, ವಿಮಾನ ನಿಲ್ದಾಣ ಸಂಸ್ಕೃತಿ, ಆಡಳಿತ,
    ಕಾರ್ಯಾಚರಣೆ ಸುಧಾರಣೆ, ಮಾಪನ, ಗ್ರಾಹಕರ ತಿಳುವಳಿಕೆ ಮತ್ತು ಕಾರ್ಯತಂತ್ರ ಮುಂತಾದ ಅಂಶಗಳನ್ನು ಪರಿಗಣಿಸಿ ಲೆವೆಲ್ 3 ಮಾನ್ಯತೆ ನೀಡಲಾಗಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 5 ಮಿಲಿಯನ್ ಪ್ರಯಾಣಿಕರ ವಿಭಾಗದಲ್ಲಿ ಈ ಮೈಲಿಗಲ್ಲನ್ನು ತಲುಪಿದ ಭಾರತದ ಮೊದಲ ವಿಮಾನ ನಿಲ್ದಾಣವಾಗಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.
    2024ರ ಸೆ.24 ರಿಂದ 26 ರವರೆಗೆ ಅಮೆರಿಕದ ಅಟ್ಲಾಂಟಾದಲ್ಲಿ ನಡೆಯಲಿರುವ ವಾರ್ಷಿಕ ಎಸಿಐ ಗ್ರಾಹಕ ಅನುಭವ ಜಾಗತಿಕ
    ಶೃಂಗಸಭೆಯಲ್ಲಿ ನೀಡಲಾಗುವ ಈ ಮಾನ್ಯತೆಯನ್ನು ಸಾಧಿಸಿದ್ದಕ್ಕಾಗಿ ಎಸಿಐ ಮಹಾನಿರ್ದೇಶಕ ಮತ್ತು ಸಿಇಒ ಲೂಯಿಸ್ ಫೆಲಿಪ್ ಡಿ ಒಲಿವೇರಾ ಅವರು ಸಾಮಾಜಿಕ ಜಾಲತಾಣದಲ್ಲಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅಭಿನಂದಿಸಿದರು. ವಿಮಾನ ನಿಲ್ದಾಣವು ಈಗ ಈ ಮಾನ್ಯತೆಯ ಹಂತ 4 ರ ಮೇಲೆ ಗಮನ ಹರಿಸಿದೆ ಎಂದು ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts