ಪೊಲೀಸ್ ಡ್ರೆಸ್ ಧರಿಸಿ ವಿಡಿಯೋ ಕಾಲ್ ವಾರಂಟ್ ಜಾರಿಯಾಗಿದೆ ಎಂದು ಬೆದರಿಕೆ 30.65 ಲಕ್ಷ ರೂ. ವಂಚನೆ

Fruad
Published on

ಮಂಗಳೂರು: ಅಪರಿಚಿತ ವ್ಯಕ್ತಿಯೊಬ್ಬ ದೂರುದಾರರಿಗೆ ಕರೆ ಮಾಡಿ ಹಣದ ವ್ಯವಹಾರ ನೆಪದಲ್ಲಿ ಬೆದರಿಕೆ ಹಾಕಿ 36 ಲಕ್ಷ ರೂ. ವಂಚನೆಗೈದಿರುವ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅ.19ರಂದು ಅಪಚಿತನೊಬ್ಬ ಕರೆ ಮಾಡಿ ‘ನಿಮ್ಮ ಮೊಬೈಲ್ ನಂಬರ್‌ನಲ್ಲಿ ಆನ್‌ಲೈನ್ ವಂಚನೆ ಪ್ರಕರಣ ದಾಖಲಾಗಿದ್ದು, ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದಲ್ಲಿ ಪ್ರಕರಣ ದಾಖಲಾಗಿದೆ. ಮುಂಬಯಿ ಸಹರಾ ಠಾಣೆಯಿಂದ ಕರೆ ಮಾಡಿರುವುದಾಗಿ ತಿಳಿಸಿದ್ದಾನೆ’.

ಅ.19ರಂದು ಬೆಳಗ್ಗೆ 11 ಗಂಟೆಗೆ ಇನ್ನೊಬ್ಬ ಪೊಲೀಸ್ ದಿರಿಸು ಹಾಕಿದ್ದ ವ್ಯಕ್ತಿ ವಿಡಿಯೋ ಕಾಲ್ ಮಾಡಿ ‘ಎಸ್‌ಬಿಐ ಬ್ಯಾಂಕ್ ಮುಂಬಯಿನಲ್ಲಿ ವಿವೇಕ್‌ದಾಸ್ ಎಂಬ ವ್ಯಕ್ತಿ ಅಕೌಂಟ್ ಓಪನ್ ಮಾಡಿ ಮಾನವ ಕಳ್ಳ ಸಾಗಾಣಿಕೆ ಅವ್ಯವಹಾರಗಳನ್ನು ಮಾಡಿದ್ದು, 3.9ಕೋಟಿ ರೂ. ವಂಚನೆ ಮಾಡಿದ್ದಾನೆ. ಈತನ ವಿಚಾರಣೆ ವೇಳೆ ಅವ್ಯವಹಾರ ಹಣದಲ್ಲಿ 38ಲಕ್ಷ ರೂ. ಕಮಿಷನ್ ನಿಮಗೆ ನೀಡಿರುತ್ತಾರೆ’ ಎಂದು ಆಪಾದಿಸಿದ್ದಾನೆ. ಇದಕ್ಕೆ ಒಪ್ಪದಿದ್ದಾಗ ನಿಮ್ಮ ಎಲ್ಲ ಖಾತೆಗಳನ್ನು ಸ್ಥಗಿತಗೊಳಿಸುವುದಾಗಿ ಹೇಳಿದ್ದಾನೆ. ಮಾತ್ರವಲ್ಲದೆ ಬಂಧನ ವಾರಂಟ್ ಇರುವುದಾಗಿ ಹೇಳಿದ್ದಾನೆ. ಇದರಿಂದ ಗಾಬರಿಗೊಂಡ ದೂರುದಾರರು ಹಂತಹಂತವಾಗಿ 30,65,000ರೂ. ಹಣವನ್ನು ವರ್ಗಾವಣೆ ಮಾಡಿದ್ದಾರೆ.

ಸೈಬರ್ ವಂಚನೆಯ ಬಗ್ಗೆ ಮೋಸದ ಅರಿವಾದ ಬಳಿಕ ಈ ಬಗ್ಗೆ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net