ಪುನೀತ್​ ಮೊದಲ ವರ್ಷದ ಪುಣ್ಯ ಸ್ಮರಣೆ: ಕಾರ್ಯಕ್ರಮ ಮುಗಿಸಿ ಮನೆಗೆ ಬಂದು ಸಾವಿನ ಹಾದಿ ಹಿಡಿದ ಅಭಿಮಾನಿ

Puneeth
Published on

ಮಂಡ್ಯ: ಪುನೀತ್​ ರಾಜ್​ಕುಮಾರ್ ಅವರ​ ಮೊದಲ ವರ್ಷದ ಪುಣ್ಯ ಸ್ಮರಣೆ ದಿನವೇ ಅಭಿಮಾನಿಯೊಬ್ಬ ಸಾವಿನ ಹಾದಿ ಹಿಡಿದಿರುವ ಹೃದಯವಿದ್ರಾವಕ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಹೊಸ ಆನಂದೂರು ಗ್ರಾಮದಲ್ಲಿ ನಡೆದಿದೆ.

ಕಿರಣ್ (22) ಮೃತ ಅಪ್ಪು ಅಭಿಮಾನಿ. ನಿನ್ನೆ ಗ್ರಾಮದಲ್ಲಿ ನಡೆದ ಅಪ್ಪು ಸ್ಮರಣೆಯಲ್ಲಿ ಕಿರಣ್​ ಪಾಲ್ಗೊಂಡಿದ್ದ. ಬಳಿಕ ಅನ್ನಸಂತರ್ಪಣೆಯನ್ನು ಕೂಡ ನಡೆಸಿದ್ದ. ಆದರೆ, ಕಾರ್ಯಕ್ರಮ ಮುಗಿದ ಬಳಿಕ ಮನೆಗೆ ಬಂದು ಕಿರಣ್​ ಸಾವಿಗೆ ಶರಣಾಗಿದ್ದಾರೆ.

ನಿನ್ನೆ (ಅ. 30) ರಾತ್ರಿ 10 ಗಂಟೆ ಸಮಯದಲ್ಲಿ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಕಿರಣ್​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಕೆಆರ್​ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net