ಮಂದಿರಾ ಬೇಡಿ ಪತಿ ರಾಜ್​ ಕೌಶಲ್​ ಹೃದಯಾಘಾತದಿಂದ ನಿಧನ

Mandira Bedi - Raj Kaushal - Final
Published on

ಮುಂಬೈ: ಬಾಲಿವುಡ್​ನ ಜನಪ್ರಿಯ ನಟಿ ಮತ್ತು ನಿರೂಪಕಿ ಮಂದಿರಾ ಬೇಡಿ ಅವರ ಪತಿ ರಾಜ್​ ಕೌಶಲ್​, ಬುಧವಾರ ಬೆಳಿಗ್ಗೆ ನಿಧನರಾಗಿದ್ದಾರೆ. ರಾಜ್​ ಕೌಶಲ್​ಗೆ 49 ವರ್ಷ ವಯಸ್ಸಾಗಿತ್ತು. ಅವರು ಮಂದಿರಾ ಬೇಡಿ ಮತ್ತು ಮಕ್ಕಳನ್ನು ಅಗಲಿದ್ದಾರೆ.

ಬಾಲಿವುಡ್​ನಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ರಾಜ್​ ಕೌಶಲ್​, 'ಆಂಟೋನಿ ಕೌನ್​ ಹೇ', 'ಶಾದಿ ಕಾ ಲಡ್ಡೂ' ಮತ್ತು 'ಪ್ಯಾರ್​ ಮೇ ಕಭೀ ಕಭೀ' ಚಿತ್ರಗಳನ್ನು ನಿರ್ದೇಶಿಸುವುದರ ಜತೆಗೆ, 'ಮೈ ಬದ್ರರ್​ ನಿಖಿಲ್​', 'ಶಾದಿ ಕಾ ಲಡ್ಡೂ' ಮತ್ತು 'ಪ್ಯಾರ್​ ಮೇ ಕಭೀ ಕಭೀ' ಚಿತ್ರಗಳನ್ನು ನಿರ್ಮಿಸಿದ್ದರು.

'ದಿಲ್​ವಾಲೇ ದುಲ್ಹನಿಯಾ ಲೇ ಜಾಯೇಂಗೆ' ಖ್ಯಾತಿಯ ಮಂದಿರಾ ಬೇಡಿ ಅವರನ್ನು 1999ರಲ್ಲಿ ರಾಜ್​ ಮದುವೆಯಾಗಿದ್ದರು. ಈ ದಂಪತಿಗೆ 2011ರಲ್ಲಿ ಒಬ್ಬ ಮಗ ಜನಸಿದ್ದ. ಇನ್ನು ಕೆಲವು ವರ್ಷಗಳ ಹಿಂದೆ ಈ ದಂಪತಿ ಒಂದು ಹೆಣ್ಣು ಮಗವನ್ನು ದತ್ತು ಪಡೆದು, ತಾರಾ ಬೇಡಿ ಕೌಶಲ್​ ಎಂದು ಹೆಸರಿಟ್ಟಿದ್ದರು.

ರಾಜ್​ ಕೌಶಲ್​ ನಿಧನಕ್ಕೆ ನೇಹಾ ಧೂಪಿಯಾ, ಟಿಸ್ಕಾ ಚೋಪ್ರಾ, ನಿರ್ದೇಶಕ ಓನಿರ್​ ಸೇರಿದಂತೆ ಬಾಲಿವುಡ್​ನ ಹಲವು ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net