ಅಸ್ಪೃಶ್ಯತೆ ಈಗಲೂ ಜೀವಂತ - ಚಿಂತಕ ಪ್ರಸಾದ್ ರಕ್ಷಿದಿ ಹೇಳಿಕೆ - ಅಂಬೇಡ್ಕರ್ ಜಯಂತಿ ಆಚರಣೆ

PTR_1 MAY_6
Published on

ಪುತ್ತೂರು: ಅಸ್ಪೃಶ್ಯತೆ ಈಗಲೂ ಜೀವಂತವಾಗಿದ್ದು, ಸಮಾಜದಲ್ಲಿ ಬದಲಾವಣೆ ತರುವ ಕಾರ್ಯಗಳಾಗಬೇಕಿದೆ. ಹಳ್ಳಿಗಳಲ್ಲಿ ದೌರ್ಜನ್ಯ ನಡೆಯುತ್ತಿದ್ದು, ಅಲ್ಲೇ ಮುಚ್ಚಿಹೋಗುತ್ತಿದೆ. ಸಂವಿಧಾನವನ್ನು ಒಪ್ಪದವರು ಈಗ ಅಂಬೇಡ್ಕರ್ ಸಂವಿಧಾನ ಶಿಲ್ಪಿ, ಆಧುನಿಕ ಮನು ಎಂದು ಬಣ್ಣಿಸುತ್ತಿದ್ದಾರೆ ಎಂದು ಚಿಂತಕ ಪ್ರಸಾದ್ ರಕ್ಷಿದಿ ಹೇಳಿದರು.

ಪುತ್ತೂರಿನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ೧೩೫ನೇ ಜನ್ಮದಿನದ ಅಂಗವಾಗಿ ಪುತ್ತೂರು ಮಾನವ ಬಂಧುತ್ವ ವೇದಿಕೆ ವತಿಯಿಂದ ಅಂಬೇಡ್ಕರ್ ಜಯಂತಿ ಹಾಗೂ ಕಾರ್ಮಿಕ ದಿನಾಚರಣೆಯಲ್ಲಿ ಮಾತನಾಡಿದರು.

ದಲಿತ ಸಂಘಟನೆ ಮುಖಂಡ ಸೇಸಪ್ಪ ನೆಕ್ಕಿಲು ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ದಲಿತ ಸಂಘರ್ಷ ಸಮಿತಿ ಜಿಲ್ಲಾ ಕಾರ್ಯದರ್ಶಿ ಆನಂದ ಬೆಳ್ಳಾರೆ, ಉಪನ್ಯಾಸಕ ಐವನ್ ಡಿಸೋಜ, ಮಾನವ ಬಂಧುತ್ವ ವೇದಿಕೆ ವಿಭಾಗೀಯ ಸಂಚಾಲಕ ಸತೀಶ್ ಕುಮಾರ್, ದ.ಕ. ಜಿಲ್ಲಾ ಸಂಚಾಲಕ ಜಯರಾಮ ಪೂಜಾರಿ ಮಾತನಾಡಿದರು.

ಮಾನವ ಬಂಧುತ್ವ ವೇದಿಕೆ ಗೌರವ ಸಲಹೆಗಾರ ಡಾ.ರಾಜಾರಾಂ ಕೆ.ಬಿ ಅಧ್ಯಕ್ಷತೆ ವಹಿಸಿದ್ದರು. ಮೌರೀಸ್ ಮಸ್ಕರೇನ್ಹಸ್ ಸ್ವಾಗತಿಸಿದರು. ಮಾನವ ಬಂಧುತ್ವ ವೇದಿಕೆ ಪುತ್ತೂರು ತಾಲೂಕು ಸಂಚಾಲಕ ಅಮಳ ರಾಮಚಂದ್ರ ಪ್ರಸ್ತಾವನೆಗೈದರು. ಅಬ್ದುಲ್ ರಹಿಮಾನ್ ಯುನಿಕ್ ವಂದಿಸಿದರು.

ದೇಶದ ೧೪೯ ಕೋಟಿ ಜನರಲ್ಲಿ ಸಂವಿಧಾನದ ಪೀಠಿಕೆ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ. ಸಂವಿಧಾನವನ್ನು ಅರ್ಥ ಮಾಡಿಕೊಳ್ಳುವ ಕೆಲಸ ನಡೆಯಬೇಕು. ಶ್ರಮ ಮಾರಾಟ ಮಾಡಿ ಬದುಕುವ ಎಲ್ಲರೂ ಕಾರ್ಮಿಕರಾಗಿದ್ದು, ಈ ದುಡಿಯವ ವರ್ಗ ಜಗತ್ತಿನ ಸೃಷ್ಟಿಗೆ ಕಾರಣಕರ್ತರಾಗಿದ್ದಾರೆ.

| ಪಿ.ಕೆ.ಸತೀಶನ್ ವಕೀಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net