More

    ಅಯ್ಯೋ ಹೀಗಾಗಬಾರದಿತ್ತು! 2800 ಕೋಟಿ ರೂ. ಲಾಟರಿ ಬಹುಮಾನ ಗೆದ್ದವನಿಗೆ ಮರುಕ್ಷಣವೇ ಕಾದಿತ್ತು ಶಾಕ್​

    ನವದೆಹಲಿ: ಯಾರೂ ಊಹಿಸದಂತೆ ಬರೋಬ್ಬರಿ 2800 ಕೋಟಿ ರೂ. ಲಾಟರಿ ಬಹುಮಾನ ಗೆದ್ದ ಖುಷಿಯಲ್ಲಿರುವಾಗಲೇ ಇದೊಂದು ಮಿಸ್ಟೇಕ್​ ಎನ್ನುವ ಮೂಲಕ ತೀವ್ರ ನಿರಾಸೆ ಉಂಟು ಮಾಡಿದ ಕಂಪನಿಯ ವಿರುದ್ಧ ವ್ಯಕ್ತಿಯೊಬ್ಬ ಕಾನೂನು ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾನೆ.

    ಈ ಘಟನೆ ಅಮೆರಿಕದ ವಾಷಿಂಗ್ಟನ್​ ಡಿಸಿಯಲ್ಲಿ ನಡೆದಿದೆ. ಜಾನ್​ ಚೀಕ್ಸ್​ ಎಂಬಾತ 2023ರ ಜನವರಿ 6ರಂದು ಪವರ್​ಬಾಲ್ ಮತ್ತು ಡಿಸಿ​ ಲಾಟರಿ ಟಿಕೆಟ್​ ಖರೀದಿ ಮಾಡಿದ್ದರು. ಮಾರನೇ ದಿನ ಡಿಸಿ ಲಾಟರಿ ವೆಬ್​ಸೈಟ್​ ನೋಡಿ ಜಾನ್​ ಚೀಕ್ಸ್​ ಅಚ್ಚರಿಗೊಂಡಿದ್ದರು. ಏಕೆಂದರೆ, ಬಹುಮಾನ ವಿಜೇತರ ಪಟ್ಟಿಯಲ್ಲಿ ಅವರ ಹೆಸರಿತ್ತು. ಖರೀದಿ ಮಾಡಿದ್ದ ಟಿಕೆಟ್​ಗೆ 340 ಮಿಲಿಯನ್​ ಡಾಲರ್​ ಬಹುಮಾನ ಒಲಿದು ಬಂದಿತ್ತು. ಭಾರತೀಯ ಕರೆನ್ಸಿ ಪ್ರಕಾರ ಬರೋಬ್ಬರಿ 2800 ಕೋಟಿ ರೂಪಾಯಿ. ಇಷ್ಟು ಮೊತ್ತದ ಬಹುಮಾನವನ್ನು ಕಂಡು ಜಾನ್​ ಚೀಕ್ಸ್​ ಫುಲ್​ ಖುಷಿಯಾಗಿದ್ದರು. ಆದರೆ, ಅವರ ಖುಷಿ ಹೆಚ್ಚು ದಿನ ಉಳಿಯಲಿಲ್ಲ.

    ಬಹುಮಾನ ವಿಜೇತರ ಪಟ್ಟಿ ಪ್ರಕಟಿಸಿದ ಕೆಲವೇ ಕ್ಷಣಗಳಲ್ಲಿ ಒಂದು ದೋಷದಿಂದಾಗಿ ಹೆಸರು ಘೋಷಣೆಯಾಗಿದೆ ಎಂದು ಕಂಪನಿ ಹೇಳಿತು. ಈ ಸುದ್ದಿ ಕೇಳಿ ಆಘಾತಕ್ಕೀಡಾದ ಜಾನ್​ ಚೀಕ್ಸ್​ ಕಂಪನಿ ವಿರುದ್ಧ ಕಾನೂನು ಹೋರಾಟ ನಡೆಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಚೀಕ್ಸ್​, ವಿಜೇತರ ಹೆಸರು ನೋಡಿ ಸ್ವಲ್ಪ ಉತ್ಸುಕನಾದೆ, ಆದರೆ, ಕೂಗಾಡಲಿಲ್ಲ ಮತ್ತು ಅರಚಾಡಲಿಲ್ಲ. ನಾನು ನಯವಾಗಿ ಸ್ನೇಹಿತರಿಗೆ ಕರೆ ಮಾಡಿದೆ. ಅವರು ಹೇಳಿದಂತೆ ನಾನು ಲಾಟರಿಯ ಚಿತ್ರವನ್ನು ತೆಗೆದೆ ಮತ್ತು ಮಲಗಲು ಹೋದೆ. ಮರುದಿನ ಲಾಟರಿ ಟಿಕೆಟ್​ ಅನ್ನು ಕಂಪನಿಗೆ ಸಲ್ಲಿಸಿದಾಗ, ಅದನ್ನು ತಿರಸ್ಕರಿಸಿದರು. ಚೀಕ್ಸ್​ಗೆ ಬರೆದ ಪತ್ರದಲ್ಲಿ, OLG ನಿಯಮಗಳ ಪ್ರಕಾರ ಟಿಕೆಟ್ ಅನ್ನು OLG ಗೇಮಿಂಗ್ ಸಿಸ್ಟಮ್‌ನಿಂದ ವಿಜೇತರಾಗಿ ಮೌಲ್ಯೀಕರಿಸದ ಕಾರಣ ಅವರ ಬಹುಮಾನದ ಹಕ್ಕು ನಿರಾಕರಿಸಲಾಗಿದೆ ಎಂದು ಕಂಪನಿ ಹೇಳಿತು. ಅಲ್ಲದೆ, ಲಾಟರಿ ಏಜೆಂಟ್​ ಒಬ್ಬ ಲಾಟರಿ ಟಿಕೆಟ್​ ಅನ್ನು ಕಸದಬುಟ್ಟಿಗೆ ಎಸೆಯುವಂತೆ ಹೇಳಿದರು ಎಂದು ಚೀಕ್ಸ್​ ತಿಳಿಸಿದ್ದಾರೆ.

    ಚೀಕ್ಸ್ ತನ್ನ ಟಿಕೆಟ್ ಅನ್ನು ಎಸೆಯದಿರಲು ನಿರ್ಧರಿಸಿದರು. ಬದಲಿಗೆ ಅದನ್ನು ಸುರಕ್ಷಿತ ಡೆಪಾಸಿಟ್​ ಪೆಟ್ಟಿಗೆಯಲ್ಲಿ ಇರಿಸಿ, ಪವರ್‌ಬಾಲ್ ಕಂಪನಿ ವಿರುದ್ಧ ಮೊಕದ್ದಮೆ ಹೂಡಲು ಕಾನೂನು ಸಲಹೆ ಪಡೆದರು. ಚೀಕ್ಸ್ ಸಲ್ಲಿಸಿದ ಮೊಕದ್ದಮೆಯು ಮಲ್ಟಿ-ಸ್ಟೇಟ್ ಲಾಟರಿ ಅಸೋಸಿಯೇಷನ್ ಮತ್ತು ಗುತ್ತಿಗೆದಾರ ಟಾವೋಟಿ ಎಂಟರ್‌ಪ್ರೈಸಸ್ ಅನ್ನು ಪ್ರತಿವಾದಿಗಳೆಂದು ಹೆಸರಿಸಿದೆ. ಪವರ್​ಬಾಲ್​ ಕಂಪನಿಯಿಂದ ಲಾಟರಿ ಮೊತ್ತ ಪಡೆಯುವತ್ತ ಚೀಕ್ಸ್​ ಹೋರಾಡುತ್ತಲೇ ಇದಾರೆ.

    ಒಪ್ಪಂದದ ಉಲ್ಲಂಘನೆ, ನಿರ್ಲಕ್ಷ್ಯ, ಭಾವನಾತ್ಮಕ ಯಾತನೆ ಮತ್ತು ವಂಚನೆ ಸೇರಿದಂತೆ ಎಂಟು ಪ್ರತ್ಯೇಕ ದೂರುಗಳನ್ನು ಚೀಕ್ಸ್​ ದಾಖಲಿಸಿದ್ದಾರೆ. ಚೀಕ್ಸ್​ ಪರ ವಕೀಲ ರಿಚರ್ಡ್ ಇವಾನ್ಸ್, ವಿಜೇತ ಸಂಖ್ಯೆಗಳು ಚೀಕ್ಸ್ ಅವರ ಸಂಖ್ಯೆಗಳಿಗೆ ಹೊಂದಿಕೆಯಾಗುವುದರಿಂದ, ಅವರು ಸಂಪೂರ್ಣ ಜಾಕ್​ಪಾಟ್​ ಅನ್ನು ಸ್ವೀಕರಿಸಬೇಕು ಎಂದು ವಾದ ಮಂಡಿಸಿದ್ದಾರೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಫೆಬ್ರವರಿ 23 ಕ್ಕೆ ನಿಗದಿಪಡಿಸಲಾಗಿದೆ. (ಏಜೆನ್ಸೀಸ್​)

    ಮತ್ತೆ ಸಾಬೀತಾಯ್ತು ಸಾನಿಯಾ ಪವರ್!​ ಶೋಯಿಬ್​ ಪತ್ನಿ ಸನಾ​ಗೆ ಪಾಕ್​ ನೆಲದಲ್ಲೇ ಭಾರಿ ಮುಖಭಂಗ

    ‘ಎಷ್ಟು ಬೇಕಾದರೂ ಹಣ ತೆಗೆದುಕೊಳ್ಳಿ’…ಉದ್ಯೋಗಿಗಳಿಗೆ ಬೋನಸ್ ನೀಡಿದ ಕಂಪನಿ…ಈ ಸಂಸ್ಥೆಯ ಬಾಸ್‌ ಯಾರೆಂದು ತಡಕಾಡಿದ ಜನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts