More

    ‘ಎಷ್ಟು ಬೇಕಾದರೂ ಹಣ ತೆಗೆದುಕೊಳ್ಳಿ’…ಉದ್ಯೋಗಿಗಳಿಗೆ ಬೋನಸ್ ನೀಡಿದ ಕಂಪನಿ…ಈ ಸಂಸ್ಥೆಯ ಬಾಸ್‌ ಯಾರೆಂದು ತಡಕಾಡಿದ ಜನ

    ನವದೆಹಲಿ: ಸಾಮಾನ್ಯವಾಗಿ ಬಹುತೇಕ ಕಂಪನಿಗಳಲ್ಲಿ ಕೆಲವು ನಿಯಮಗಳ ಪ್ರಕಾರ ಮಾತ್ರ ಉದ್ಯೋಗಿಗಳಿಗೆ ಬೋನಸ್ ನೀಡಲಾಗುತ್ತದೆ. ಇದನ್ನು ನೇರವಾಗಿ ನೌಕರರ ಖಾತೆಗೆ ಕಳುಹಿಸಲಾಗುತ್ತದೆ ಅಥವಾ ಚೆಕ್ ಮೂಲಕ ನೀಡಲಾಗುತ್ತದೆ. ಆದರೆ ಕಂಪನಿಯೊಂದು ಹಾಗೆ ಮಾಡದೆ, ಉದ್ಯೋಗಿಗಳ ಮುಂದೆ ನೋಟುಗಳ ರಾಶಿಯನ್ನು ಇರಿಸಿ ಅವರ ಮುಂದೆ ಕೆಲವು ಷರತ್ತುಗಳನ್ನು ಹಾಕಿದೆ. ಅಷ್ಟೇ ಅಲ್ಲ, ಈ ಹಣವನ್ನು ಒಂದು ಆಟದ ಮೂಲಕ ವಿತರಿಸಿದೆ. ಈ ಆಟದಲ್ಲಿ ಸುಮಾರು 5000 ಉದ್ಯೋಗಿಗಳು ಭಾಗವಹಿಸಿದ್ದರು.

    ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ, ಕಂಪನಿಯು ಉದ್ಯೋಗಿಗಳಿಗೆ ಹಣವನ್ನು ಎಣಿಸುವ ಆಟ ಇಟ್ಟುಕೊಂಡಿತು. ಈ ಆಟದಲ್ಲಿ ಹಣ ಎಣಿಸಲು ಸಾಧ್ಯವಾದವರು ಅಷ್ಟು ಹಣವನ್ನು ಮನೆಗೆ ತೆಗೆದುಕೊಂಡು ಹೋದರು. ಸೋಷಿಯಲ್ ಮೀಡಿಯಾದಲ್ಲಿ ಈ ಗೇಮ್ ಚರ್ಚೆಯಾದ ತಕ್ಷಣ, ಈ ಕಂಪನಿಯ ಬಾಸ್‌ಗಾಗಿ ರೆಸ್ಯೂಮ್‌ ಹಿಡಿದು ಜನ ಕ್ಯೂ ನಿಂತಿದ್ದಾರೆ.

    'ಎಷ್ಟು ಬೇಕಾದರೂ ಹಣ ತೆಗೆದುಕೊಳ್ಳಿ'…ಉದ್ಯೋಗಿಗಳಿಗೆ ಬೋನಸ್ ನೀಡಿದ ಕಂಪನಿ…ಈ ಸಂಸ್ಥೆಯ ಬಾಸ್‌ ಯಾರೆಂದು ತಡಕಾಡಿದ ಜನ

    ನೌಕರರ ಮುಂದಿಟ್ಟ ನೋಟುಗಳ ರಾಶಿ
    ಚೀನಾದಲ್ಲಿ ಹೊಸ ವರ್ಷದ ಸಂದರ್ಭದಲ್ಲಿ, ಹೆಚ್ಚಿನ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಬೋನಸ್‌ಗಳನ್ನು ನೀಡುತ್ತವೆ. ಈ ನಿಟ್ಟಿನಲ್ಲಿ ಇಲ್ಲಿನ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ವಿಶಿಷ್ಟ ರೀತಿಯಲ್ಲಿ ಬೋನಸ್ ನೀಡಿದೆ. ಮೊದಲಿಗೆ ಕಂಪನಿಯು ಗೊತ್ತುಪಡಿಸಿದ ಸ್ಥಳದಲ್ಲಿ ದೊಡ್ಡ ಟೇಬಲ್ ಅನ್ನು ಇರಿಸಿದೆ. ಅದರ ಮೇಲೆ 100 ಯುವಾನ್ ನೋಟುಗಳ ರಾಶಿಯನ್ನು ಇರಿಸಲಾಯಿತು. ನಂತರ ನೌಕರರು ಈ ಹಣವನ್ನು ಎಣಿಕೆ ಮಾಡಬೇಕಾಗಿತ್ತು. ಇದಕ್ಕಾಗಿ ನಿಗದಿತ ಸಮಯವನ್ನು ನೀಡಲಾಯಿತು.

    ನೋಟುಗಳನ್ನು ಎಣಿಸಲು ಕೆಲವರಿಗೆ 1 ನಿಮಿಷ ಮತ್ತು ಕೆಲವರಿಗೆ 2 ನಿಮಿಷ ಸಿಕ್ಕಿತು. ಗರಿಷ್ಠ ಸಮಯವನ್ನು 15 ನಿಮಿಷಗಳಿಗೆ ನಿಗದಿಪಡಿಸಲಾಗಿತ್ತು. ಈ ಆಟದಲ್ಲಿ ಇತರ ಕೆಲವು ನಿಯಮಗಳನ್ನು ಸಹ ನಿರ್ಧರಿಸಲಾಯಿತು. ಅವುಗಳಲ್ಲಿ ನೋಟುಗಳನ್ನು ನಿಖರವಾಗಿ ಎಣಿಕೆ ಮಾಡಬೇಕು. ಒಂದು ನೋಟನ್ನೂ ತಪ್ಪಾಗಿ ಎಣಿಸಿದರೆ, ಬೋನಸ್‌ನಿಂದ 1000 ಯುವಾನ್ ಕಡಿತಗೊಳಿಸುವುದಾಗಿ ತಿಳಿಸಲಾಗಿತ್ತು.

    ಜಾಕ್ ಪಾಟ್ ಹೊಡೆದ ಉದ್ಯೋಗಿಗಳು 
    ಈ ನೋಟು ಎಣಿಕೆ ಸ್ಪರ್ಧೆಯನ್ನು ಚೀನಾದ ಹೆನಾನ್ ಪ್ರಾಂತ್ಯದಲ್ಲಿರುವ ಕುವಾಂಗ್ಶನ್ ಕ್ರೇನ್ ಕಂಪನಿ ಆಯೋಜಿಸಿತ್ತು. ಇದಕ್ಕಾಗಿ ಒಟ್ಟು 20 ಹಣದ ಕೌಂಟರ್ ಗಳನ್ನು ಅಳವಡಿಸಲಾಗಿತ್ತು. 5 ಸಾವಿರ ನೌಕರರು ಇದರಲ್ಲಿ ಭಾಗವಹಿಸಿದ್ದರು. ಈ ಆಟದಲ್ಲಿ, ಕಂಪನಿಯು ಒಟ್ಟು 100 ಮಿಲಿಯನ್ ಯುವಾನ್ ಬೋನಸ್ ಅನ್ನು ವಿತರಿಸಿತು. ಅಂದಹಾಗೆ ಈ ಆಟದಲ್ಲಿ ಜಾಕ್‌ಪಾಟ್ ಹೊಡೆದ ಉದ್ಯೋಗಿ 97,800 ಯುವಾನ್ ಮೌಲ್ಯದ ನೋಟುಗಳನ್ನು ಎಣಿಸಿದ್ದಾನೆ. ಅಂದರೆ 11,27,837 ನಗದು ಹಣವನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾನೆ. ಅಷ್ಟೊಂದು ನಗದು ಇದ್ದರಿಂದ ಆ ವ್ಯಕ್ತಿ ಅದನ್ನು ಗೋಣಿಚೀಲದಲ್ಲಿಟ್ಟುಕೊಂಡು ಮನೆಗೆ ತೆಗೆದುಕೊಂಡು ಹೋಗಿದ್ದಾನೆ. 

    ಚಂಡೀಗಢ ಮೇಯರ್‌ ಚುನಾವಣೆ ವಿವಾದ: ‘8 ಮತಗಳನ್ನು ಮಾನ್ಯವೆಂದು ಪರಿಗಣಿಸಿ ಮತ್ತೊಮ್ಮೆ ಎಣಿಕೆ ಮಾಡಿ’: ಸುಪ್ರೀಂ ಆದೇಶ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts