More

    ಗಂಧನಹಳ್ಳಿಯಲ್ಲಿ ಜಾತ್ರಾ ಮಹೋತ್ಸವ ಇಂದಿನಿಂದ

    ಗಂಧನಹಳ್ಳಿ: ಕೆ.ಆರ್.ನಗರ ತಾಲೂಕಿನ ಗಂಧನಹಳ್ಳಿ ಗ್ರಾಮದಲ್ಲಿ ಗ್ರಾಮ ದೇವತೆ ಶ್ರೀ ಹುಣಸಮ್ಮ ದೇವರ ಉತ್ಸವ ಹಾಗೂ ಜಾತ್ರಾ ಮಹೋತ್ಸವದ ಪ್ರಯುಕ್ತ ಮೇ 3ರಿಂದ 5ರವರೆಗೆ ಸಾವಿರಾರು ಜನರ ನಡುವೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

    ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು ಈಗಾಗಲೇ ಬರದ ಸಿದ್ಧತೆ ನಡೆಸಿದ್ದಾರೆ. ಶ್ರೀ ಹುಣಸಮ್ಮ ತಾಯಿಯ ಹಬ್ಬದ ಅಂಗವಾಗಿ ದೇವಸ್ಥಾನದ ಗಂಧನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳು ನವ ವಧುವಿನಂತೆ ಸಿಂಗಾರ ಗೊಳ್ಳುತ್ತಿವೆ. ದೇವಾಲಯದ ಸುತ್ತಮುತ್ತ ಸ್ವಚ್ಛತಾ ಕಾರ್ಯವು ಬರದಿಂದ ಸಾಗುತ್ತಿದೆ.

    ಮೇ 3, 4, ಹಾಗೂ 5 ರಂದು ಶ್ರೀ ಹುಣಸಮ್ಮ ತಾಯಿಯ ರಥೋತ್ಸವ ಅಂಗವಾಗಿ ತವರಿಗೆ ಆಗಮಿಸುವ ಹೆಣ್ಣು ಮಕ್ಕಳು ದೇವಸ್ಥಾನಕ್ಕೆ ತೆರಳಿ ದೇವರಿಗೆ ಮಡಿಲು ತುಂಬಿಸುವ ಶಾಸ್ತ್ರ, ತಂಬಿಟ್ಟಿನ ಆರತಿ ಮಾಡಿಸಿ ವಿಶೇಷ ಪೂಜೆ ಸಲ್ಲಿಸಿ ಬರುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ. ಅಲ್ಲದೆ ದೇವರಿಗೆ ವಿವಿಧ ರೀತಿಯ ಆರತಿಗಳನ್ನು ಮಾಡಿ, ವಿಶೇಷ ಪೂಜೆ ಸಲ್ಲಿಸಿ ಮಹಾ ಮಂಗಳಾರತಿಯೊಂದಿಗೆ ಪ್ರಸಾದ ವಿನಿಯೋಗ ಮಾಡಲಾಗುತ್ತದೆ.
    ಬರುವ ಶುಕ್ರವಾರ, ಶನಿವಾರ, ಭಾನುವಾರ ಮೂರು ದಿನಗಳಲ್ಲಿ ನಡೆಯುವ ಶ್ರೀ ಹುಣಸಮ್ಮ ತಾಯಿಯ ರಥೋತ್ಸವಕ್ಕೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಗಂಧನಹಳ್ಳಿ ಗ್ರಾಮದ ರಾಜಬೀದಿಗಳಲ್ಲಿ ಮೆರವಣಿಗೆ ಸಾಗಲಿದೆ. ಶ್ರೀ ಹುಣಸಮ್ಮ ತಾಯಿ ದೇವಾಲಯದ ಆವರಣಕ್ಕೆ ರಥವನ್ನು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಶ್ರೀ ಹುಣಸಮ್ಮ ತಾಯಿಯನ್ನು ಪ್ರಮುಖ ಬೀದಿಗಳಿಂದ ಮೆರವಣಿಗೆ ಮುಖಾಂತರ ಹೊರಟು ರಥೋತ್ಸವದ ದಿನದಂದು ದೇವಾಲಯದಲ್ಲಿ ಮುಂಜಾನೆಯಿಂದಲೇ ವಿಧಿ ವಿಧಾನಗಳಿಂದ ಪೂಜಾ ಕೈಂ ಕಾರ್ಯಗಳನ್ನು ನಡೆಸಲಾಗುತ್ತದೆ. ಗಂಧನಹಳ್ಳಿ ಗ್ರಾಮದಲ್ಲಿ ಹುಣ್ಸಮ್ಮ ಉತ್ಸವಕ್ಕೆ ಸಾವಿರಾರು ಭಕ್ತರು ಸೇರಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts