More

    ಭಕ್ತರಿಗೆ ಮನರಂಜನೆ ನೀಡಿದ ನೀರಾಟ

    ದೇವದುರ್ಗ: ಜಾಲಹಳ್ಳಿ ಪಟ್ಟಣದ ಆರಾಧ್ಯದೈವ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಮಂಗಳವಾರ ವ್ರತ ಕೈಗೊಂಡ ಯುವಕರಿಂದ ನೀರಾಟ ಸ್ಪರ್ಧೆ ನಡೆಯಿತು.

    ರಥೋತ್ಸವಕ್ಕೆ ಒಂದು ದಿನ ಮುನ್ನ ಹಾಗೂ ರಥೋತ್ಸವ ದಿನ ನೀರಾಟ ಸ್ಪರ್ಧೆ ಏರ್ಪಡಿಸಲಾಗುತ್ತದೆ. ಸುಮಾರು 220ಕ್ಕೂ ಹೆಚ್ಚು ಯುವಕರು ಸ್ಪರ್ಧೆಯಲ್ಲಿ ಭಾಗವಹಿಸಿ ಪರಸ್ಪರ ನೀರೆರಚಿ ಸಂಭ್ರಮಿಸಿದರು. ನೀರಾಟ ಸ್ಪರ್ಧೆಗೆ ಶತಮಾನಗಳ ಇತಿಹಾಸವಿದೆ.

    ಸುಮಾರು 500 ವರ್ಷಗಳ ಹಿಂದೆ ನಾಡಿನಲ್ಲಿ ಬರ ಆವರಿಸಿದ್ದಾಗ ದೇವಸ್ಥಾನದಲ್ಲಿ ನೆಲೆಸಿದ್ದ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿ ತಪಸ್ಸು ಕೈಗೊಂಡಿದ್ದರು. ಈ ಮೂಲಕ ಗಂಗೆಯನ್ನು ಭೂಮಿಗೆ ಕರೆಸಿದ್ದರು. ಅವರ ಪವಾಡ ಶಕ್ತಿಯಿಂದ ದೇವಸ್ಥಾನದ ಮುಂಭಾಗದಲ್ಲಿ ನೀರಿನ ಬುಗ್ಗೆಗಳು ಎದ್ದಿದ್ದವು. ನಂತರ ಮಳೆ ಬಂದು ಭೂಮಿ ತಂಪಾಗಿತ್ತು. ಈ ಹಿನ್ನೆಲೆಯಲ್ಲಿ ನೀರಾಟ ಸ್ಪರ್ಧೆ ನಡೆದಿತ್ತು. ಆ ಸಂಪ್ರದಾಯ ಇಂದಿಗೂ ಮುಂದುವರಿದಿದೆ. ವ್ರತ ಕೈಗೊಂಡವರು ಜಾತ್ರೆಗೆ ಚಾಲನೆ ನೀಡಿದ ತಕ್ಷಣದಿಂದ ಬರಿಗಾಲ್ಲಿನಲ್ಲಿ ಸಂಚರಿಸುತ್ತಾರೆ. ಮಾಂಸ ಆಹಾರ ಸೇವನೆ ನಿಷಿದ್ಧವಾಗಿದೆ.

    ಮದ್ಯಪಾನ ಸೇರಿ ಇತರ ದುಶ್ಚಟಗಳಿಂದ ಜನರು ದೂರವಿರುತ್ತಾರೆ. ದೇವಸ್ಥಾನದಲ್ಲೇ ಜಳಕ, ಪ್ರಸಾದ, ಪೂಜಾ ಕಾರ್ಯವಾಗಲಿದೆ. ರಥೋತ್ಸವ ನಂತರ ವ್ರತ ಬಿಟ್ಟು ದೈನಂದಿನ ಜೀವನಕ್ಕೆ ಮರಳುತ್ತಾರೆ. ಹಂಪಿ ಹುಣ್ಣಿಮೆ ದಿನ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿನ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಜರುಗುವ ಪೂಜೆ ಮಾದರಿಯಲ್ಲೇ ಜಾಲಹಳ್ಳಿಯಲ್ಲೂ ಕಾರ್ಯಕ್ರಮ ನಡೆಯುತ್ತವೆ. ಸೋಮವಾರ ರಾತ್ರಿ ಆಮೆ, ನಾಗರಹಾವು, ಮೀನು, ಸಿಂಹ, ನವಿಲು, ಬಿಳಿ ಕುದುರೆ, ಆನೆ, ಹನುಮಂತ, ಗರಡುವಾಹನ ಸೇವೆ ವಿಜೃಂಭಣೆಯಿಂದ ಜರುಗಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts