More

    ಪ್ರೀತಿ ಮಂದುವರಿಸದೆ ಬ್ರೇಕ್​ ಅಪ್​ ಎಂದಿದಕ್ಕೆ ಕ್ಯಾಬ್​​ನಲ್ಲಿ ಕುಳ್ಳಿರಿಸಿ ಚಾಕುವಿನಿಂದ 13 ಬಾರಿ ಇರಿದ ಯುವಕ..!

    ದೆಹಲಿ: ಯುವಕನೊಬ್ಬ ತನ್ನ ಪ್ರೇಯಸಿಯನ್ನ ಕ್ಯಾಬ್​​ನಲ್ಲಿ ಕುಳ್ಳಿರಿಸಿ 13 ಬಾರಿ ಚಾಕುವಿನಿಂದ ಇರಿದ ಘಟನೆ ದೆಹಲಿಯ ಲಾಡೋ ಸರಾಯ್ ಪ್ರದೇಶದಲ್ಲಿ ನಡೆದಿದೆ. ಬೆಳಗ್ಗೆ 6.30ಕ್ಕೆ ಮನೆ ಬಿಟ್ಟ ಯುವತಿಗೆ ಈ ರೀತಿಯಾಗಿದೆ. ಆರೋಪಿ ಮತ್ತು ಹಲ್ಲೆಗೊಳಗಾದ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು.


    ಇಂದು ಬೆಳಗ್ಗೆ ಮನೆಯಿಂದ ಹೊರಟ ಯುವತಿ ಹೊಸ ಕೆಲಸದ ಇಂಟರ್ವ್ಯೂಗಾಗಿ ತೆರಳಿದ್ದಳು. ಆರೋಪಿಯನ್ನು ಆಕೆ ಪ್ರೀತಿಸುತ್ತಿದ್ದು, ಕೆಳವು ದಿನಗಳಿಂದ ಆತನಿಂದ ದೂರವಾಗಲು ಪ್ರಯತ್ನಿಸುತ್ತಿದ್ದಳು. ಇದೇ ಕೋಪದಿಂದ ಆತ ಯುವತಿಗೆ 13 ಬಾರಿ ಚಾಕುವಿನಿಂದ ಇರಿದಿದ್ದಾನೆ.


    ದೂರವಾಗಬೇಕು ಎಂದುಕೊಂಡಿದ್ದವಳ ಮಹಿಳೆ ಮೇಲೆ ಹಲ್ಲೆ ನಡೆಸಿದ ಯುವಕ, ಕೋಪದಿಂದ ಮಹಿಳೆಯ ಮುಖ, ತೊಡೆ ಸೇರಿದಂತೆ ಹಲವೆಡೆ 13 ಬಾರಿ ಇರಿದಿದ್ದಾನೆ.


    ಸದ್ಯ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಹಲ್ಲೆಗೊಳಗಾದ ಯುವತಿಯ ತಾಯಿ ಕುಂತಲಾ ಮಾತನಾಡಿ, ಮಗಳು ಲಜಪತ್​ನಗರದಲ್ಲಿ ಇಂಟರ್​ವ್ಯೂಗೆಂದು ಹೋಗುತ್ತಿದ್ದಳು, ಕ್ಯಾಬ್​ನಲ್ಲಿ ಯುವಕ ಚೂರಿಯಿಂದ ಇರಿಯಲಾಗಿದೆ. ಯುವತಿ ಆಫೀಸ್​ಗೆ ಹೋಗಲು ತಡವಾಗುತ್ತಿದೆ.

    ನಿನ್ನೊಂದಿಗೆ ನನಗೆ ಮಾತನಾಡಲು ಇಷ್ಟವೇ ಇಲ್ಲ ಎಂದು ಎಷ್ಟೇ ಹೇಳಿದರೂ ಯುವಕ ಆಕೆಯನ್ನ ಕ್ಯಾಬ್​​ನಲ್ಲಿ ಕುಳಿತುಕೊಳ್ಳುವಂತೆ ಒತ್ತಾಯಿಸಿದ್ದಾನೆ.


    ಯುವತಿ ಕಾರಿನಲ್ಲಿ ಕುಳಿತುಕೊಂಡ ತಕ್ಷಣವೇ ಆತ ಆಕೆಯ ಮೇಲೆ ಚೂರಿಯಿಂದ ಇರಿದು ಹಲ್ಲೆ ಮಾಡಿದ್ದಾನೆ. ಈತ ನನಗೆ ಕಳೆದ 2 ವರ್ಷಗಳಿಂದ ಪ್ರೀತಿ ಮಾಡುವಂತೆ ಆಕೆಯನ್ನು ಪೀಡಿಸುತ್ತಿದ್ದ ಎಂದು ಯುವತಿ ದೂರಿದ್ದಾಳೆ. ಇವರಿಬ್ಬರೂ ಮೂರು ವರ್ಷಗಳ ಹಿಂದೆ ಒಂದೇ ಆಫೀಸ್​ನಲ್ಲಿ ಕೆಲಸ ಮಾಡುತ್ತಿದ್ದಾಗ ಭೇಟಿಯಾಗಿದ್ದರು.


    ಇದೀಗ ಕ್ಯಾಬ್​ನಲ್ಲಿದ್ದ ಚಾಒಲಕನೇ ಆರೋಪಿಯನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts