More

    VIDEO: ವಾಕ್ಯೂಮ್​ ಕ್ಲೀನರ್​​ನಿಂದ ಮೊಟ್ಟೆಗೆ ಹಾಕಿದ್ದ ಮೆಣಸಿನ ಪುಡಿ ತೆಗೆಯಲು ಹೋದವನಿಗಾಯ್ತು ಮುಜುಗರ !

    ಸೋಷಿಯಲ್​ ಮೀಡಿಯಾಗಳಲ್ಲಿ ಎಂತೆಂಥಾ ಅಪರೂಪ ಎನ್ನಿಸುವಂತಹ ವಿಡಿಯೋಗಳು ವೈರಲ್​ ಆಗುತ್ತವೆ. ಹಾಗೇ ಮೂರು ದಿನಗಳ ಹಿಂದೆ ಪೋಸ್ಟ್​ ಮಾಡಲಾದ ಒಂದು ಮೊಟ್ಟೆ ವಿಡಿಯೋ ಸಿಕ್ಕಾಪಟೆ ಸದ್ದುಮಾಡುತ್ತಿದೆ.

    ಮೊಟ್ಟೆಯ ಮೇಲಿನ ಮೆಣಸಿನ ಪುಡಿಯನ್ನು ತೆಗೆಯಲು ವ್ಯಕ್ತಿಯೋರ್ವ ವಾಕ್ಯೂಮ್​ ಕ್ಲೀನರ್​ ಬಳಕೆ ಮಾಡಿ, ನಗೆಪಾಟಲಿಗೀಡಾಗಿದ್ದನ್ನು ವಿಡಿಯೋದಲ್ಲಿ ನೋಡಬಹುದು. ಇದನ್ನು ನೋಡಿದ ನೆಟ್ಟಿಗರಂತೂ ಫುಲ್​ ನಕ್ಕಿದ್ದಾರೆ. ಇದನ್ನೂ ಓದಿ: ಕೊವಿಡ್​-19ಗೆ 2021ರೊಳಗೆ ಲಸಿಕೆ ಸಿಗುತ್ತದೆ ಎಂಬ ನಿರೀಕ್ಷೆಯೇ ಬೇಡ: ಡಬ್ಲ್ಯೂಎಚ್​ಒ

    ಒಂದು ಪ್ಲೇಟ್​ ಮೇಲೆ ಮೊಟ್ಟೆಯ ಹಳದಿ ಭಾಗವನ್ನು ಇಡಲಾಗಿದೆ (ಬೇಯಿಸಿದ್ದಲ್ಲ). ಅದರ ಮೇಲೆ ಮೆಣಸಿನ ಪುಡಿಯನ್ನು ಸ್ವಲ್ಪ ಜಾಸ್ತಿಯೆನಿಸುವಷ್ಟು ಹಾಕಲಾಗಿದೆ. ಆದರೆ ಅದನ್ನು ಕೈಯಿಂದ ತೆಗೆಯಲು ಸಾಧ್ಯವಿಲ್ಲ. ಯಾಕೆಂದರೆ ಅದು ಮೊಟ್ಟೆಗೆ ಅಂಟಿಕೊಂಡುಬಿಟ್ಟಿದೆ. ಹಾಗಾಗಿ ಈ ವ್ಯಕ್ತಿ ಭರ್ಜರಿ ಉಪಾಯ ಮಾಡಿ, ವ್ಯಾಕ್ಯೂಮ್​ ಕ್ಲೀನರ್​ನಲ್ಲಿ ಅದನ್ನೆಲ್ಲ ಒಂದು ಕಡೆಯಿಂದ ತೆಗೆಯುತ್ತ ಬರುತ್ತಾನೆ. ಆದರೆ…ಮೊಟ್ಟೆಯ ಹಳದಿ ಹತ್ತಿರ ನೇರವಾಗಿ ಕ್ಲೀನರ್​ ಹಿಡಿದಾಗ..ಅದು ಡಬ್​ ಎಂದು ಒಡೆದು ವಾಕ್ಯೂಮ್​ ಕ್ಲೀನರ್ ಒಳಗೆ ಸೇರಿಕೊಳ್ಳುತ್ತದೆ. ಅದನ್ನು ನೋಡಿದರೆ ಎಂಥವರಿಗಾದರೂ ನಗು ಬರುವುದು ಸಹಜ.

    ವಿಡಿಯೋವನ್ನು ಸೌತ್​ ಆಫ್ರಿಕಾದ ಸ್ಗುಜಾನಾ ಎಂಬುವರು ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದು ಹಳೇ ವಿಡಿಯೋ ಆಗಿದ್ದು, ಈಗ ಮತ್ತೊಮ್ಮೆ ಟ್ರೆಂಡ್ ಆಗಿದೆ ಎನ್ನಲಾಗಿದೆ. ಪೆಪ್ಪರ್​ ತೆಗೆಯಲು ಹೋಗಿ ಇಡೀ ಮೊಟ್ಟೆಯನ್ನೇ ಕಳೆದುಕೊಂಡ ವ್ಯಕ್ತಿಯನ್ನು ನೋಡಿ ನೆಟ್ಟಿಗರು ಬಿದ್ದುಬಿದ್ದು ನಕ್ಕಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts